ಮೈಸೂರು: ಲಾಕ್‌ಡೌನ್‌ನಿಂದಾಗಿ ಮುಚ್ಚಿರುವ ಶಾಲೆಗಳನ್ನು 3 ತಿಂಗಳು ತೆರೆಯಬೇಡಿ. ಅಕ್ಟೋಬರ್‌ನಿಂದ 2 ಪಾಳಿಗಳಲ್ಲಿ ಶಾಲೆ ನಡೆಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಕೊರೋನಾ ತಗುಲದಂತೆ ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಿ. ಕೊರೋನಾ ವೈರಸ್‌ಗೆ ಇನ್ನೂ ಲಸಿಕೆ ಸಿಕ್ಕಿಲ್ಲ. ಅಂತರ ಕಾಪಾಡಿಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದೇ ಸದ್ಯಕ್ಕಿರುವ ಮದ್ದು ಎಂದು ಹೇಳಿದ್ದಾರೆ