ಬೆಂಗಳೂರು:ಇನ್ನೂ ಒಂದು ವರ್ಷ ಐತೆ ಲೋಕಸಭಾ ಚುನಾವಣೆ ಆಗಲೇ ಬಿಜೆಪಿ ಪಕ್ಷ ಚುನಾವಣೆಗೆ ಸಜ್ಜಾಗಲು ತಯಾರಿನಡೆಸಿದೆ.

ಇನ್ನು ಚುನಾವಣೆ ಗೆಲುವಿಗೆ ಟೊಂಕ‌ ಕಟ್ಟಿ ನಿಂತ ಬಿಜೆಪಿ ಯುವ ಮೋರ್ಚಾವೂ ಮೋದಿ ಸರ್ಕಾರದ ಯೋಜನೆಗಳನ್ನು ಬೈಕ್‌ ರ್ಯಾಲಿಗಳ ಮೂಲಕ ಮನವರಿಕೆ ಮಾಡಲು ಯತ್ನಿಸುಲು ಮುಂದಾಗಿದೆ.

ರಾಜ್ಯಾದ್ಯಂತ ಒಟ್ಟು 5 ದಿನಗಳ ಕಾಲ ಬೃಹತ್ ಬೈಕ್‌ ರ್ಯಾಲಿ ಆಯೋಜನೆ ಮಾಡಿದೆ. ಜೂನ್ 15 ರಿಂದ 20 ರವರೆಗೆ ರಾಜ್ಯಾದ್ಯಂತ ಯುವ ಮೋರ್ಚಾ ಬೈಕ್‌ ರ‍್ಯಾಲಿ ಆಯೋಜನೆ ಮಾಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕೂಡ ಬೈಕ್‌ ರ‍್ಯಾಲಿ ಮಾಡುತ್ತಿದ್ದು, ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ ರ‍್ಯಾಲಿ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರಂತೆ.!