ಬೆಂಗಳೂರು: ಹತ್ತು ವರ್ಷಕ್ಕೂ ಹೆಚ್ಚು ಕಾಲ ನಗರಗಳಲ್ಲಿ ಕಾರ್ಯ ನಿರ್ವಹಿಸಿದ್ದ ಶಿಕ್ಷಕರು ಇನ್ನು ಮುಂದೆ ಕಡ್ಡಾಯವಾಗಿ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.

2018 ರಲ್ಲಿ ಶಿಕ್ಷಣ ಇಲಾಖೆ ಹೊರಡಿಸಲಾಗಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ ಹಾಗಾಗಿ ನಗರದಲ್ಲಿಯೇ  ಜಾಂಡ ಹಾಕಿದ್ದ ಶಿಕ್ಷಕರು ಇನ್ನುಮುಂದೆ ಹಳ್ಳಿಗಳಲ್ಲಿ ಕೆಲಸಮಾಬೇಕಾಗಿದೆಯಂತೆ.

ಶಿಕ್ಷಕರ ವರ್ಗಾವಣೆ ಗಾಗಿ ರೂಪಿಸಲಾಗಿದ್ದ ಮಾರ್ಗ ಸೂಚಿಗಳನ್ನು ಪ್ರಶ್ನೆಸಿ ಕೆಲ ಶಿಕ್ಷಕರು ಕೆಎಟಿ ಮೆಟ್ಟಲನ್ನು ಹತ್ತಿದ್ದರು. ಆದ್ರೆ ಕೆಎಟಿ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದಲ್ಲದೆ, ನಿನ್ನೆ ಕೋರ್ಟ್ ಆದೇಶ ಹೊರಬಂದಿದ್ದು, ಹತ್ತು ವರ್ಷಗಳ ಕಾಲ ನಗರದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ಹಳ್ಳಿಯಲ್ಲಿ ಕೆಲಸಮಾಡಬೇಕಿದೆ ಎಂದು ಹೇಳಿದೆಯಂತೆ. ತಪ್ಪಿದ್ರೆ ದಂಡ ತೆರಬೇಕಾಗುತ್ತದೆಯಂತೆ

ಹಾಗಾಗಿ ಬಹಳ ವರ್ಷಗಳಿಂದ ನಗರದಲ್ಲಿ ಕಾಯಂ ಆಗಿ ಕೆಲಸ ಮಾಡುತ್ತಿದ್ದ ಶಿಕ್ಷಕರು ರೆಡಿ ಆಗಬೇಕಿದೆ ಹಳ್ಳಿಗಳಿಗೆ.!

( ಸಾಂದರ್ಭಿಕ ಚಿತ್ರ)