ನವದೆಹಲಿ : ನೀವು ವಾಟ್ಸಪ್ ಬಳಕೆದಾರರೆ ಹಾಗಾದರೆ ಇನ್ನು ಮುಂದೆ  ವಾಟ್ಸಪ್ ಪೇ’ ಸೇವೆಯು ಎಲ್ಲ ಗ್ರಾಹಕರಿಗೂ ಮೇ ಅಂತ್ಯದ ಹೊತ್ತಿಗೆ ಲಭ್ಯವಾಗಲಿದೆ ಎನ್ನಲಾಗಿದೆ.

ಫೋನ್ ಪೇ, ಗೂಗಲ್ ಪೇ ಸೇರಿದಂತೆ ಯುಪಿಐ ಆಧಾರಿತ ಡಿಜಿಟಲ್ ಪೇಮೆಂಟ್ ಸೇವೆಯ ಮಾರುಕಟ್ಟೆಯಲ್ಲಿ ಫೇಸ್ ಬುಕ್ ಒಡೆತನದ ವಾಟ್ಸಪ್ ಪೇ ಸೇವೆಯು ಮೇ ತಿಂಗಳಾಂತ್ಯಕ್ಕೆ ಎಲ್ಲ ಗ್ರಾಹಕರಿಗೆ ಲಭ್ಯವಾಗಲಿದೆ!

ಪ್ರಾರಂಭಕ್ಕೆ ಐಸಿಐಸಿಐ ಬ್ಯಾಂಕ್, ಏಕ್ಸಿಸ್ ಬ್ಯಾಂಕ್ ಮತ್ತು ಹೆಚ್ ಡಿಎಫ್ ಸಿ ಬ್ಯಾಂಕ್ ಸಹಭಾಗಿತ್ವದಲ್ಲಿ ಸೇವೆ ನೀಡಲಿದೆ. ಮುಂದಿನ ದಿನಗಳಲ್ಲಿ ಎಸ್ ಬಿಐಗೂ ವಿಸ್ತರಣೆಯಾಗಲಿದೆ. ಈ ಮೂಲಕ ವಾಟ್ಸಪ್ ಬಳಕೆದಾರರಿಗೆ ಡಿಜಿಟಲ್ ಪೇಮೇಂಟ್ ಸೇವೆಯು ಲಭ್ಯವಾಗಲಿದೆಯಂತೆ