ಬೆಂಗಳೂರು: ಇನ್ನು ಮುಂದೆ ಪೊಲೀಸ್ ಪೇದೆ’ ಅನ್ನುವಂತಿಲ್ಲ ಎಂದು ಕರ್ನಾಟಕ ಪೊಲೀಸ್ ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.!

ಕರ್ನಾಟಕ ಪೊಲೀಸ್ ಇಲಾಖೆಯ ಹೊಸ ಆದೇಶದ ಪ್ರಕಾರ ಇನ್ನು ಮುಂದೆ ಪೇದೆ, ಮುಖ್ಯ ಪೇದೆ ಎಂದು ಕರೆಯುವಂತಿಲ್ಲ, ಬರೆಯುವಂತೆಯೂ ಇಲ್ಲ. ಪೇದೆಗಳನ್ನು ಕಾನ್ಸ್‌ಟೇಬಲ್, ಮುಖ್ಯ ಪೇದೆಯನ್ನು ಹೆಡ್ ಕಾನ್ಸ್‌ಟೇಬಲ್ ಎಂದು ಕರೆಯಬೇಕು. ಬರವಣಿಗೆಯಲ್ಲಿಯೂ ಸಹ ಇದೇ ಪದಗಳನ್ನು ಬಳಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.!