ಇದೇ 18 ರಂದು ಬಿಜೆಪಿ ಅಭ್ಯರ್ಥಿಗಳ ಘೋಷಣೆ: ಯಡಿಯೂರಪ್ಪ.!
ಚಿಕ್ಕಮಗಳೂರು : ಮಾರ್ಚ್ 17 ರಂದು ಬಿಜೆಪಿ ಕೋರ್ ಕಮಿಟಿ ಸಭೆ ಇದೆ. ೧8 ರಂದು ಬಿಜೆಪಿ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.

ಶೃಂಗೇರಿಯಲ್ಲಿ ಮಾತನಾಡಿದ ಈ ಬಾರಿ ದೇಶಾದ್ಯಂತ ಮೋದಿ ಅಲೆ ಇದೆ. ಕಳೆದ ಬಾರಿಗಿಂತ ೧೦ ರಿಂದ ೧೨ ಪರ್ಸೆಂಟ್ ವೋಟ್ ಜಾಸ್ತಿ ಬರುತ್ತೆ. ಎಲ್ಲಾ ಸರ್ವೆಗಳಲ್ಲೂ ಮೋದಿಯೇ ಪ್ರಧಾನಿ ಎಂದು ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ೨೨ ಸೀಟ್ ಗೆದ್ದೇ ಗೆಲ್ತೇವೆ. ಮಂಡ್ಯದಲ್ಲಿ ಇಲ್ಲಿಯವರೆಗೂ ನಿರ್ಧಾರ ಮಾಡಿಲ್ಲ. ಅಂಬರೀಶ್ ಬಗ್ಗೆ ಕುಮಾರಸ್ವಾಮಿಗೆ ಅಭಿಮಾನವಿತ್ತು ಆದರೆ ಅವರು ಸಾವನ್ನಪ್ಪಿದ ನಂತರ ಅಂಬರೀಶ್ ಕೊಡುಗೆ ಏನು ಎಂದು ಉಲ್ಟಾ ಮಾತನಾಡುತ್ತಾರೆ ಎಂದರು.