ಬೆಂಗಳೂರು: ರಾಜ್ಯದಲ್ಲಿ ಮದ್ಯದ ದರದಲ್ಲಿ ಏರಿಕೆಯಾಗಿದ್ದು, ಭಾನುವಾರದಿಂದಲೇ ಮದ್ಯದ ದರದಲ್ಲಿ ಶೇ. 8 ರಷ್ಟು ಹೆಚ್ಚಾಗಲಿದೆ.

2018-19 ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಘೋಷಣೆಯಾಗಿರುವಂತೆ ತೆರಿಗೆ ಏರಿಕೆಯಾಗಿದ್ದರಿಂದ ಮದ್ಯದ ದರ ಹೆಚ್ಚಳವಾಗಲಿದೆ.

ಅಬಕಾರಿ ಇಲಾಖೆ ಸಿದ್ದತೆ ನಡೆಸಿದೆ. 2 ರಿಂದ 18 ನೇ ಘೊಷಿತ ಬೆಲೆ ಸ್ಲಾಬ್ ಗಳ ಮೇಲೆ ಶೇ. 8 ರಷ್ಟು ಅಬಕಾರಿ ಸುಂಕ ಹೆಚ್ಚಳವಾಗಲಿದೆ. ಹಾಗಾಗಿ ಬಿಯರ್ ಭಾರತೀಯ ಮದ್ಯ ಹಾಗೂ ವಿದೇಶಿ ಮದ್ಯ ಸೇರಿದಂತೆ ಎಲ್ಲ ಬಗೆಯ ಮದ್ಯಗಳ ಮೇಲೆ ಮೂಲ ದರದ ಜೊತೆಗೆ ಹೊಸ ಹೆಚ್ಚುವರಿ ತೆರಿಗೆ ದರವೂ ಸೇರಿಕೊಳ್ಳಲಿದೆ.

ತೆರಿಗೆ ಹೆಚ್ಚಳ ಪ್ರಕ್ರಿಯೆ ಪ್ರತಿ ವರ್ಷ ಏಪ್ರಿಲ್ 1 ರಿಂದ ಜಾರಿಗೆ ಬರಲಿದ್ದು, ಇದು ನಿರಂತರವಾಗಿ ನಡೆಯುವ ಹಣಕಾಸು ಪ್ರಕ್ರಿಯೆಯಾಗಲಿದೆ. ಹಾಗಾಗಿ ಇದಕ್ಕೆ ಚುನಾವಣಾ ಮಾದರಿ ನೀತಿ ಸಂಹಿತೆ ಅಡ್ಡಿಯಾಗಬಾರದು ಎಂದು ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತರಾದ ಎಸ್.ಎಲ್ ರಾಜೇಂದ್ರ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ ಒಟ್ಟಿನಲ್ಲಿ ಡ್ರಿಂಕ್ಸ್ ರೇಟ್ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಆಗಿದೆ