ಬೆಂಗಳೂರು: ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಯೊಂದು ಹರಿದಾಡಿತು. ಆ ಸುದ್ದಿ ಏನಪ್ಪ ಅಂದ್ರೆ ಕೊರೋನಾ  ಏಫೆಕ್ಟ್ ನಿಂದ ಕಾಲೇಜುಗಳಿಗೆ ಮೇ 20ರವರೆಗೆ 50 ದಿನಗಳ ರಜೆ: ಕಾಲೇಜು ಶಿಕ್ಷಣ  ಕರೊನಾ ಸಂಕಷ್ಟದಿಂದ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿವೆ. ಪರೀಕ್ಷೆ, ಅರ್ಜಿ ಸಲ್ಲಿಕೆ, ದಾಖಲಾತಿ ಪ್ರಕ್ರಿಯೆಸೇರಿ ಎಲ್ಲ ರೀತಿಯ ಕೆಲಸಗಳನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಎಂಬ ಸುದ್ದಿ ಹರಿದಾಡಿತು.

ಜತೆಗೆ, ಶಾಲಾ – ಕಾಲೇಜುಗಳಿಗೆ ಈಗಾಗಲೇ ಏಪ್ರಿಲ್​ 11ರವರೆಗೆ ರಜೆ ನೀಡಿದ್ದು, ನಂತರದಲ್ಲಿ ಎಂದಿನಂತೆ ಬೇಸಿಗೆ ರಜೆ ಶುರುವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ.

ಇದೀಗ ಕಾಲೇಜು ಶಿಕ್ಷಣ ಇಲಾಖೆ ಏಪ್ರಿಲ್​ 1ರಂದು ಹೊರಡಿಸಿರುವ ಸುತ್ತೋಲೆಯಂತೆ ವಿದ್ಯಾರ್ಥಿಗಳಿಗೆ 50 ದಿನಗಳ ರಜೆ ಘೋಷಿಸಲಾಗಿದೆ. ಅಂದರೆ ಏಪ್ರಿಲ್​ ಒಂದರಿಂದ ಮೇ 20ರವರೆಗೆ ರಜೆ ನೀಡಲಾಗಿದೆ. ಆದರೆ, ಎಂದಿನಂತೆ ಕಾಲೇಜಿನ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಆದರೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಸ್ಪಷ್ಟನೆ ನೀಡಿದ್ದು ಇದೊಂದು ಫೇಕ್ ( ಸುಳ್ಳು) ಸುದ್ದಿ ಇದಾಗಿದ್ದು, ಯಾರು ಇದನ್ನು ನಂಬಬಾರದು ಎಂದು ಹೇಳಿದೆ ಅದರ ಕಾಪಿಯನ್ನು ಪ್ರಕಟಿಸ ಲಾಗಿದೆ.