ಕಲಬುರಗಿ: ನಾನು ಮೂರು ಬಾರಿ ಸೋತಿದ್ದೇನೆ. ಹೀಗಾಗಿ ಈ ಬಾರಿಯಾದ್ರೂ ನನಗೆ ಆಶೀರ್ವಾದ ಮಾಡಿ ಅಂತಾ ಕಣ್ಣೀರು ಹಾಕಿ ಅಡ್ಡ ಬಿದ್ದವರು ಸೇಡಂ ಬಿಜೆಪಿ ಅಭ್ಯರ್ಥಿ ರಾಜಕುಮಾರ್ ಪಾಟೀಲ್ ತೆಲ್ಕೂರ್ ಯಾರ ಮುಂದೆ ಅಂದ್ರೆ ಸಚಿವ ರಾಜ್‍ನಾಥ್ ಸಿಂಗ್ .

ಪಟ್ಟಣದ ಮಾತೃಛಾಯ ಶಾಲಾ ಆವರಣದಲ್ಲಿಂದು ಆಯೋಜಿಸಲಾಗಿದ್ದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡುವಾಗ, ನಾನು ಮೂರು ಬಾರಿ ಕಡಿಮೆ ಅಂತರ ಮತಗಳಿಂದ ಸೋತಿದ್ದೇನೆ. ಈ ಬಾರಿಯಾದರು ನನಗೆ ವಿಧಾನಸಭೆಗೆ ಕಳುಹಿಸಿಕೊಡಿ ಅಂತಾ ರಾಜ್‍ನಾಥ್ ಸಿಂಗ್ ಎದುರೇ ವೇದಿಕೆಯಲ್ಲಿ ಸಾಷ್ಟಾಂಗ ನಮಸ್ಕಾರ ಹಾಕುವ ಮೂಲಕ ಭಾವುಕರಾಗಿ, ನನ್ನ ಗೆಲ್ಲಿಸಿ ಅಂತಾ ಮನವಿ ಮಾಡಿದ್ದಾರೆ.

ಇದೇ ಅಲ್ವ ಗೆಲ್ಲುವುದಕ್ಕಾಗಿ ಏನೆಲ್ಲಾ ಸರ್ಕಸ್ ಮಾಡಬೇಕು ನೋಡ್ರಪ್ಪ.!