ಬೆಂಗಳೂರು: ದೇವಕಿಮತ್ತು ವಸುದೇವರು ಸೆರೆಮನೆಯಲ್ಲಿ ಇರುವಾಗ ಕೃಷ್ಣನ ಜನನವಾಗುತ್ತದೆ. ತಂದೆ ವಸುದೇವ, ತಾಯಿ ದೇವಕಿ. ಸಾಕು ತಂದೆ ನಂದರಾಜ, ಸಾಕುತಾಯಿ ಯಶೋದೆ. ಉಗ್ರಸೇನ ಮಹಾರಾಜ ಕೃಷ್ಣನ ತಾತ. ಕಂಸ ಕೃಷ್ಣನಿಂದಲೇ ಮರಣ ಹೊಂದುತ್ತಾನೆ.

ಆದ್ರೆ ಶ್ರೀ ಕೃಷ್ಣನಿಗೆ ಎಷ್ಟು ಹೆಸರುಗಳಿಂದ ಕರೆಯುತ್ತಾರೆ ಅಂದ್ರೆ.!

ಅಚ್ಯುತ: ಚ್ಯುತಿಯಿಲ್ಲದವ, ಯಾವುದೇ ದೋಷ ಇಲ್ಲದವನು., ಅಸುರಾರಿ : ರಾಕ್ಷಸರಿಗೆ ಸದಾಕಾಲ ಶತ್ರುವಾಗಿದ್ದವನು., ವಾಸುದೇವ : ವಸುದೇವನ ಮಗ, ನಂದಗೋಪಾಲ: ನಂದ ಗೋಪನ ಮಗನಾಗಿದ್ದವನು, ಕಾಲದೇವ: ಯಮನನ್ನು ಮೀರಿಸಿದವ., ಗಿರಿಧರ: ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಲ್ಲೇ ಎತ್ತಿದವ, ಗೋಪಾಲ: ಗೋವುಗಳನ್ನು ಪಾಲಿಸಿ, ಕಾಪಾಡುವವನು., ವೇಣುಗೋಪಾಲ : ಕೊಳಲನ್ನು ನುಡಿಸುವವನು., ಗೋವಿಂದ: ಹಸುಗಳನ್ನು ರಕ್ಷಿಸುವವನು, ಚಕ್ರಧಾರಿ: ಚಕ್ರಾಯುಧವನ್ನು ಧರಿಸಿದವನು, ದ್ವಾರಕಾಧೀಶ/ದ್ವಾರಕಾನಾಥ: ದ್ವಾರಕಾನಗರಕ್ಕೆ ಒಡೆಯನಾದವನು, ಜಗನ್ನಾಥ: ಜಗತ್ತಿಗೆ ನಾಯಕನಾದವನು, ಜನಾರ್ದನ: ಎಲ್ಲರಿಗೂ ವರವನ್ನು ಕೊಡುವನು, ಪತಿತ ಪಾವನ: (?) ಪಾಪಿಗಳನ್ನು ಉದ್ದರಿಸುವವನು, ಪರಬ್ರಹ್ಮ: ಬ್ರಹ್ಮನ ತಂದೆ (ವಿಷ್ಣು), ಪಾರ್ಥ ಸಾರಥಿ: ಅರ್ಜುನನ ಸಾರಥಿ, ಮಧುಸೂದನ: ಮಧು ಎಂಬ ರಾಕ್ಷಸನನ್ನು ನಾಶ ಮಾಡಿದವನು., ಮಾಧವ: ವಸಂತ ಋತು ತರುವವ, ಮಾ =ಲಕ್ಷ್ಮಿ -ಧವ =ಒಡೆಯ (?), ಮುಕುಂದ: ಮುಕ್ತಿಯನ್ನು ಕೊಡುವವನ, ಯೋಗೇಶ್ವರ: ಯೋಗಿಗಳಿಗೆಲ್ಲಾ ಸ್ವಾಮಿಯಾದವನು, ಶ್ಯಾಮಸುಂದರ: ಕಪ್ಪು ವರ್ಣದವನು, ಹೃಷೀಕೇಶ: ಹೃಷಿಕಗಳನ್ನು(ಇಂದ್ರಿಯ) ಹಿಡಿದಿಟ್ಟವನು, ಪುರುಷೋತ್ತಮ : ಪುರುಷರಲ್ಲೇ ಅತ್ಯುತ್ತಮನಾದವನು, ನವನೀತ : ತಾಜಾ ಬೆಣ್ಣೆಯನ್ನು ತಿಂದವನು, ಸುದರ್ಶನ : ಸುದರ್ಶನ ಚಕ್ರ ಹೊಂದಿದವ, ಮುರಳಿ : ಕೊಳಲನ್ನು ಹೊಂದಿದವ, ಜನಾರ್ಧನ , ಮುರಾರಿ, ಘನಶ್ಯಾಮ: ಕೃಷ್ಣನ ಮೈಬಣ್ಣ ಮೋಡದಂತೆ ಕಪ್ಪು, ದಾಮೋದರ:, ಪಾಂಡುರಂಗ:, ಕೇಶವ:, ವಿಠಲ:, ಶ್ರೀರಂಗನಾಥ ಹೀಗೆ ಕರೆಯಲ್ಪಡುತ್ತಾನೆ ಶ್ರೀ ಕೃಷ್ಣ.!