ರಾಯಚೂರು:  ಎತ್ತುಗಳ ಹಬ್ಬವನ್ನು ಮಣ್ಣೆತ್ತಿನ ಅಮವಾಸ್ಯೆ ಎಂದು ಕರೆಯುವುದು ವಾಡಿಕೆ. ಮಣ್ಣೆತ್ತಿನ ಎತ್ತುಗಳಿಗೆ ಕೃಷಿಯಲ್ಲಿ ಪ್ರಧಾನವಾದ ಕೆಲಸ. ಹಬ್ಬ. ಶ್ರಮದಿಂದ ಉತ್ತು, ಬಿತ್ತಿ, ಲೋಕಕ್ಕೆ ಅನ್ನವನ್ನು ಕೊಡುವ ಬಸವನ ಬಗ್ಗೆ ಕೃಜ್ಞತೆಯನ್ನು ಸೂಚಿಸುವ ದಿನ.ಚಕ್ಕುಲಿಯನ್ನು ಮಾಡಿ ಬಸವನಿಗೆ ನೈವೇದ್ಯ ಮಾಡುತ್ತಾರೆ. ಮಣ್ಣಿನಲ್ಲಿ ಮಾಡಿದ ಬಸವನಿಗೆ ಇಂದು ಪೂಜೆ ಮಾಡಲೇಬೇಕೆಂದು ವಿಧಿ.

ಮಣ್ಣೆತ್ತಿನ ಬಸವಣ್ಣಗಳನ್ನು ಮಣ್ಣೆತ್ತಿನ ಅಮಾವಾಸ್ಯೆಯಾದ ಶುಕ್ರವಾರದಂದು ಮನೆಯ ಜಗುಲಿಯಲ್ಲಿ ಪ್ರತಿಷ್ಠಾಪಿಸಿ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ಪದಾರ್ಥಗಳ ನೈವೇದ್ಯ ಮಾಡುವುದು ಕೃಷಿಕ ಕುಟುಂಬಗಳ ಸಹಜ ಸಂಪ್ರದಾಯ.

ಈಗ ಕೃಷಿಗೆ ಯಂತ್ರದ ಪರಿಕರಗಳು ಬಂದ ನಂತರ ಮನೆಯಲ್ಲಿ ಎತ್ತುಗಳಿಗೆ ಜಾಗವಿಲ್ಲದಾಯಿತು. ಆದರೂ ಸರ ಹೈದರಬಾದ್ ಕರ್ನಾಟಕ ಭಾಗದಲ್ಲಿ ಮಣ್ಣೆತ್ತಿನ ಅಮಾಸ್ಯೆಯ ದಿನ ರಾಸುಗಳಿಗೂ ಪೂಜ್ಯಭಾವನೆಯಿಂದ ಪೂಜಿಸಲ್ಪಡುತ್ತದೆ.