ಬೆಂಗಳೂರು: ಚುನಾವಣೆ ವರ್ಷ ಆಗಿದ್ದರಿಂದ, ಚುನಾವಣೆಗೂ ಮುನ್ನವೇ  ರಾಜ್ಯದ ರಾಜಕೀಯದಲ್ಲಿ ಕೆಸರಾಟ ಪ್ರಾರಂಭವಾಗಿತ್ತು. 15 ರ ನಂತರ ನಾನೇ ಮುಖ್ಯ ಮಂತ್ರಿ ಎಂದು ಯಡಿಯೂರಪ್ಪ , ಇಲ್ಲ ಅವರ ಅಪ್ಪನಾಣೆ ಮುಖ್ಯ ಮಂತ್ರಿ ಆಗಲ್ಲ ಅಂತ ಮುಖ್ಯ ಮಂತ್ರಿ ಸಿದ್ದರಾಮಯ್ಯ, ನಮ್ಮಿಂದಲೇ ಅಧಿಕಾರ ನಡೆಸಲು ಸಾಧ್ಯ ಅಂತ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಚಾಣುಕ್ಯ ಅಮಿತ್ ಶಾ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರದಲ್ಲಿ ತೊಡಗಿದರು. ಆರೋಪ -ಪ್ರತ್ಯಾರೋಪಗಳ ಸುರಿಮಳೆ  ಕೇಳಿ ಮತದಾರರಿಗೆ ತೆಲೆ ಚಿಟ್ಟು ಹಿಡಿದಿತ್ತು. ಈ ಎಲ್ಲದಕ್ಕೂ ಇಂದು ಬಹಿರಂಗ ಸಭೆಯಿಂದ ಅಂತ್ಯವಾಗಲಿದೆ.

ಮತದಾನಕ್ಕೆ 48 ಗಂಟೆ ಮೊದಲು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.ಇದೇ ಮೇ 12 ರಂದು ಶನಿವಾರ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು,. ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ‘ಅಂತರಂಗ’ ಪ್ರಚಾರ ಆರಂಭವಾಗಲಿದೆ.

ಇಂದು ಸಂಜೆಯಿಂದ ಕ್ಷೇತ್ರದ ಹೊರಗಿನವರೆಲ್ಲಾ ಹೊರ ಹೋಗಬೇಕಿದೆ. ಇನ್ನೇನಿದ್ದರು ಒಳ ತಂತ್ರಗಳಷ್ಟೇ ಬಾಕಿ.