ಬೆಂಗಳೂರು: ಇಂದು ಖಗೋಳದಲ್ಲಿ ವಿಶೇಷವಾದ ವಿಸ್ಮಯವೊಂದು ಇಂದು ನಡೆಯಲಿದ್ದು, ಅಪರೂಪದ ಬ್ಲೂ ಮೂನ್​(ಚಂದ್ರ) ದರ್ಶನವಾಗಲಿದೆ.

19 ವರ್ಷಗಳ ನಂತರ ಇದರ ದರ್ಶನವಾಗುತ್ತಿದೆ. ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಬಂದರೆ ಅದಕ್ಕೆ ‘ಬ್ಲೂ ಮೂನ್’ ಎಂದು ಕರೆಯಲಾಗುತ್ತದೆ. ಈ ಹಿಂದೆ ಇದೇ ತಿಂಗಳ ಅಕ್ಟೋಬರ್​ 1ರಂದು ಚಂದ್ರ ಕಾಣಿಸಿಕೊಂಡಿದ್ದ. ಆದರೆ ಇದೀಗ ಮತ್ತೊಮ್ಮೆ ಗೋಚರವಾಗುತ್ತಿದೆ. ಈ ಹಿಂದೆ 2001ರ ಜೂನ್ ತಿಂಗಳಲ್ಲಿ ‘ಬ್ಲೂ ಮೂನ್’ ಕಾಣಿಸಿಕೊಂಡಿತ್ತು. ಮುಂದಿನ ಬ್ಲೂ ಮೂನ್ 2050ರ ಸೆ. 30ರಂದು ಕಾಣಿಸಿಕೊಳ್ಳಲಿದೆ.