ಬೆಂಗಳೂರು: ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ಇಂದು ಹೊರಬೀಳಲಿದ್ದು, ಅನರ್ಹ 17 ಶಾಸಕರ ಹಣೆಬರಹ ನಿರ್ಧಾರವಾಗಲಿದೆ.

15 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಸುಪ್ರೀಂ ತೀರ್ಪಿನ ಆಧಾರದ ಮೇಲೆ ಉಪ ಚುನಾವಣೆ ನಡೆಯುತ್ತದೆಯೊ ಅಥವಾ ಮುಂದೂಡಿಕೆಯಾಗುತ್ತದೆಯೊ? ಅನರ್ಹರು ಸ್ಪರ್ಧೆ ಮಾಡಬಹುದಾ? ಎಂಬುದು ನಿರ್ಧಾರಗೊಳ್ಳಲಿದೆ.

ರಾಜ್ಯ ರಾಜಕೀಯದ ಮೇಲೆ ನಾನಾ ರೀತಿಯ ಪರಿಣಾಮ ಬೀರಲಿರುವ ಈ ತೀರ್ಪು ಎಲ್ಲರ ಕುತೂಹಲದ ಕೇಂದ್ರವೂ ಆಗಿದೆ.