ಚಿತ್ರದುರ್ಗ: ಅಕ್ಕ-ತಂಗಿಯರು, ನಗರದ ಗ್ರಾಮ ದೇವತೆಗಳಾದ ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮರವರ ಭೇಟಿಗೆ ನಗರದ ದೊಡ್ಡಪೇಟೆಯಲ್ಲಿ ಸಿದ್ದತೆ ಮಾಡಲಾಗಿದೆ.

ಇಂದು ಬೆಳಿಗ್ಗೆಯಿಂದಲೇ ನಗರಸಭೆಯ ಪೌರ ಕಾರ್ಮಿಕರು ರಸ್ತೆ ಮತ್ತು ಅಕ್ಕ ಪಕ್ಕದಲ್ಲಿ ಚರಂಡಿಗಳನ್ನು ಸಹಾ ಸ್ವಚ್ಚ ಮಾಡುವುದರ ಮೂಲಕ ಶುಚಿತ್ವವನ್ನು ಕಾಪಾಡಲಾಗಿದೆ, ಇದ್ದಲ್ಲದೆ ಸೊಳ್ಳೆಗಳನ್ನು ಹೋಗಲಾಡಿಸುವ ಸಲುವಾಗಿ ಪುಡಿಗಳನ್ನು ಸಿಂಪಡಣೆ ಮಾಡಲಾಗಿದೆ. ಇದರ ಜೊತೆಯಲ್ಲಿ ಅಕ್ಕ-ತಂಗಿಯ ಭೇಟಿಯಾಗುವ ಮುಂಭಾಗದಲ್ಲಿನ ಪ್ರದೇಶವನ್ನು ಸಹಾ ಶುಚಿ ಮಾಡಲಾಗಿದೆ.

ಅಕ್ಕ-ತಂಗಿಯ ಬೇಟಿಯ ಸಮಯದಲ್ಲಿ ಯಾವುದೇ ರೀತಿಯ ಅಹಿತಕರವಾದ ಘಟನೆ ನಡೆಯದಂತೆ ಮತ್ತು ಭೇಟಿಯ ಸಮಯದಲ್ಲಿ ಯಾವುದೇ ನೂಕು ನುಗ್ಗಲು ಆಗದಂತೆ ಮುಂಜಾಗತಾ ಕ್ರಮವಾಗಿ ಮೈಸೂರು ಕಫೆಯಿಂದ ಬಸವೇಶ್ವರ ದೇವಾಲಯದವರೆಗೆ ರಸ್ತೆಯ ಅಕ್ಕ ಪಕ್ಕದಲ್ಲಿ ಬ್ಯಾರಿಕೇಟಿಂಗ್ ಮಾದರಿಯಲ್ಲಿ ಕಂಭಗಳನ್ನು ನಡೆವುದರ ಮೂಲಕ ರಕ್ಷಣೆಯನ್ನ ಮಾಡಲಾಗಿದೆ.

ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮರವರ ಭೇಟಿ ವರ್ಷಕ್ಕೆ ಒಮ್ಮೆ ಮಾತ್ರವೇ ನಡೆಯಲಿದ್ದು ಇದಕ್ಕೆ ಬೇಕಾದ ಸಿದ್ದತೆಯನ್ನು ಭಕ್ತಾಧಿಗಳು ಮತ್ತು ಅಭಿಮಾನಿಗಳು ಮಾಡುತ್ತಿದ್ದಾರೆ. ಅಕ್ಕ-ತಂಗಿಯ ಕೋಪವನ್ನು ಶಮನ ಮಾಡಲು ಹಿರಿಯಕ್ಕ ಉಚ್ಚಂಗಿಯಲ್ಲಮ್ಮ ಸಾರಥ್ಯವನ್ನು ವಹಿಸುತ್ತಾಳೆ. ಈ ಹಿನ್ನಲೆಯಲ್ಲಿ ಏಕನಾಥೇಶ್ವರಿಯ ಸಿಡಿ ಉತ್ಸವವಾದ ಮೂರು ದಿನಕ್ಕೆ ಅಕ್ಕ-ತಂಗಿಯರ ಭೇಟಿ ಕಾರ್ಯಕ್ರಮ ನಡೆಯಲಿದೆ. ಇಂದು ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ.

ಸಂಜೆ ಸಮಯದಲ್ಲಿ ನಡೆಯಲಿರುವ ಭೇಟಿ ಕಾರ್ಯಕ್ರಮಕ್ಕೆ ನಗರಸಭೆ ಸೇರಿದಂತೆ ಸಮಿತಿಯವರು ಸಕಲ ಸಿದ್ದತೆಯನ್ನು ಮಾಡಲಿದ್ದಾರೆ ಭೇಟಿ ನಡೆಯುವ ಸ್ಥಳವನ್ನು ವಿವಿಧ ರೀತಿಯ ಹೂಗಳಿಂದ ಅಲಂಕಾರ ಮಾಡುವುದ್ದಲ್ಲದೆ, ಬೆಳಕಿನ ವ್ಯವಸ್ಥೆಯನ್ನು ಸಹಾ ಮಾಡಲಾಗುತ್ತಿದೆ. ಬೇಸಿಗೆ ಸಮಯವಾಗಿದ್ದರಿಂದ ಧೂಳು ಹೇಳದಂತೆ ನೀರನ್ನು ರಸ್ತೆಗೆ ಸಿಂಪಡಣೆ ಮಾಡುವ ಕಾರ್ಯ ನಡೆಯಲಿದೆ.
ಸಂಜೆ ನಡೆಯುವ ಅಕ್ಕ-ತಂಗಿಯರ ಭೇಟಿಗೆ ಬನ್ನಿ ತಾಯಿಯ ಕೃಪಗೆ ಪಾತ್ರಾರಾಗಿ.!