ಚಿತ್ರದುರ್ಗ: ನನ್ನ ವಾರ್ಡಿನಲ್ಲಿ ನಡೆದ ಸರ್ಕಾರದ ಕಾರ್ಯಕ್ರಮವನ್ನು ಅವಧಿಗಿಂತ ಮುಂಚೆ ನಡೆಸಿದ್ದರಿಂದ ಸಂಬಂಧಪಟ್ಟ ಅಧಿಕಾರಿಯನ್ನು ನಗರಸಭೆ ಸದಸ್ಯೆ ಶಾಮಲ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆದಿದೆ.
ಚಿತ್ರದುರ್ಗ ನಗರದ ದಾವಣಗೆರೆ ರಸ್ತೆಯ ಯೂನಿಯನ್ ಪಾರ್ಕನಲ್ಲಿ ಇಂದು ಸರ್ಕಾರದ ಇಂದಿರಾ ಕ್ಯಾಂಟೀನ್ ಪ್ರಾರಂಭಕ್ಕೆ ಸಜ್ಜಾಗಿತ್ತು. ಆಹ್ವಾನ ಪತ್ರಿಕೆಯಲ್ಲಿ ೧೦ ಗಂಟೆಗೆ ಎಂದು ಸಮಯವನ್ನು ನಮೂದಿಸಲಾಗಿತ್ತು ಆದರೆ ಸಮಯ ಮೀರಿದರು ಯಾವ ಚುನಾಯಿತ ಪ್ರತಿನಿಧಿಯೂ ಸಹಾ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ, ಈ ಸಮಯದಲ್ಲಿ ಕೆಲವೊಂದು ಅಧಿಕಾರಿಗಳು ಮಾತ್ರವೆ ಹಾಜರಿದ್ದರು.

 

೧೦.೩೦ರ ಸಮಯಕ್ಕೆ ಆಗಮಿಸಿದ ನಗರಸಭಾ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಜಯಮ್ಮ ಬಾಲರಾಜ್ ಸಹಾ ಬಂದು ಸುಮ್ಮನೆ ಕುರ್ಚಿಯಲ್ಲಿ ಕಾಯುತ್ತಾ ಕುಳಿತರು, ಉದ್ಘಾಟನಾ ಸಮಯ ಮೀರುತ್ತಿದ್ದರು ಯಾರೂ ಸಹಾ ಯಾರೂ ಸಹಾ ಮಾತನಾಡದೇ ತಮ್ಮ ತಮ್ಮ ಒಳಗೆ ಮಾತನಾಡಿಕೊಳ್ಳುತ್ತಿದ್ದರು ೧೦.೪೫ರ ಸಮಯಕ್ಕೆ ಜಿಲ್ಲಾಧಿಕಾರಿಯವರು ಆಗಮಿಸಿದಾಗ ನೆರೆದಿದ್ದ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೇರಿಕೊಂಡು ಇಂದಿರಾ ಕ್ಯಾಂಟೀನ್‌ನ್ನು ಉದ್ಘಾಟನೆ ಮಾಡಿ ಒಳಗಡೆ ಬಂದು ಕೇಸರಿಬಾತ್ ಮತ್ತು ಖಾರ ಪೊಂಗಲ್ ಸವಿದರು ನಂತರ ಅಲ್ಲಿಂದ ಕೆಲವೇ ಸಮಯದೊಳಗೆ ಜಾಗವನ್ನು ಖಾಲಿ ಮಾಡಿದರು.
ಇದಾದ ಸ್ವಲ್ಪ ಸಮಯದಲ್ಲಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿ ಆ ವಾರ್ಡಿನ ನಗರಸಭಾ ಸದಸ್ಯೆ ಶ್ರೀಮತಿ ಶ್ಯಾಮಲ ಶಿವಪ್ರಕಾಶ್ ಕಾರ್ಯಕ್ರಮ ಮುಗಿದಿದ್ದನ್ನು ಕಂಡು ಖಾರವಾಗಿ ನನ್ನ ವಾರ್ಡಿನಲ್ಲಿ ನಾನು ಬಾರದೆ ಹೇಗೆ ಕಾರ್ಯಕ್ರಮ ಮುಗಿಸಿದಿರಾ, ನನಗೆ ೧೧ ಗಂಟೆಗೆ ಬರಲು ತಿಳಿಸಿ ಅದಕ್ಕಿಂತ ಮುಂಚೆಯೇ ಕಾರ್ಯಕ್ರಮ ಮುಗಿದಿದೆ, ಇಂತಹ ಕಾಟಾಚಾರಕ್ಕೆ ಯಾಕೆ ಕಾರ್ಯಕ್ರಮ ಮಾಡುತ್ತಿರಾ ನನ್ನ ವಾರ್ಡಿನಲ್ಲಿ ನಾನು ಅಧ್ಯಕ್ಷತೆ ವಹಿಸಬೇಕಿತ್ತು ಎಂದು ಅಲ್ಲಿಂದ್ದ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು, ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ಇದಕ್ಕೆ ನನಗೂ ಸಂಬಂಧ ಇಲ್ಲ ನಾವು ಜಾಗವನ್ನು ನೀಡಿದ್ದೇವೆ ಉಳಿದ ಕಾರ್ಯಕ್ರಮವನ್ನು ಎಸಿಯವರು ಮಾಡುತ್ತಾರೆ ಎಂದು ಹೇಳಿದರು ಸಹಾ ಅದಕ್ಕೆ ಮನ್ನಣೆ ನೀಡದೇ ಅಧಿಕಾರಿಗಳು ಮಹಿಳೆಯರಿಗೆ ಮನ್ನಣೆ ನೀಡುವುದಿಲ್ಲ ಎಲ್ಲದಕ್ಕೂ ತಿರಸ್ಕಾರ ಮಾಡಲಾಗುತ್ತಿದೆ, ಕಾರ್ಯಕ್ರಮಕ್ಕೆ ಸಮಯ ಇದ್ದರೂ ಸಹಾ ಕಾಯದೆ ಅತುರವಾಗಿ ಮಾಡಲಾಗಿದೆ ಎಂದು ಆರೋಪಿಸಿ ಮಾತನಾಡಿದ್ದಾರೆ..