ಬೆಂಗಳೂರು: ಇಂದಿನಿಂದ ‘ನಮ್ಮ ಮೆಟ್ರೋ’ ರೈಲುಗಳು ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಸಂಚರಿಸಲಿವೆ. ಕಳೆದ 4 ದಿನಗಳಿಂದ ಕೇವಲ 6 ತಾಸುಗಳಿಗೆ ಮೆಟ್ರೋ ರೈಲು ಸೇವೆ ಸೀಮಿತವಾಗಿತ್ತು. ಆದರೆ, ಇಂದಿನಿಂದ ಮುಂಜಾನೆ 7ರಿಂದ ನಗರದ ನಾಲ್ಕೂ ತುದಿಗಳಿಂದ ಮೆಟ್ರೋ ರೈಲುಗಳು ಹೊರಡಲಿವೆ.

ದಟ್ಟಣೆಯ ಅವಧಿಯಲ್ಲಿ ಪ್ರತಿ 4 ನಿಮಿಷಕ್ಕೊಂದು ಹಾಗೂ ಉಳಿದ ಅವಧಿಯಲ್ಲಿ 10 ನಿಮಿಷಗಳಿಂದ 15 ನಿಮಿಷಗಳ ಅಂತರದಲ್ಲಿ ಸೇವೆ ಇರಲಿದೆ. ಇದರಿಂದ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಹೆಚ್ಚಳ ಆಗಬಹುದು ಎಂದು ಬಿಎಂಆರ್‌ಸಿಎಲ್ ನಿರೀಕ್ಷಿಸಿದೆ.