ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2018-19 ನೇ ಸಾಲಿನ  ದ್ವಿತೀಯ ವರ್ಷದ ಬಿಎ, ಬಿಕಾಂ  ಮತ್ತು  2019-20 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತಿ ಹಾಗೂ 2019-20 ಜನವರಿ ಆವೃತಿ ಸಾಲಿನಲ್ಲಿ ಪ್ರವೇಶಾತಿ ಪಡೆದ ಪ್ರಥಮ ವರ್ಷದ ಬಿಎ, ಬಿಕಾಂ, ಬಿ.ಲಿಬ್ ಐಎಸ್‍ಸಿ, ಎಂಎ, ಎಂ.ಕಾಂ, ಎಂಎಸ್‍ಸಿ, ಎಂಬಿಎ, ಎಂಲಿಬ್ ಐಎಸ್‍ಸಿ, ಬಿಇಡಿ ವಿದ್ಯಾರ್ಥಿಗಳಿಗೆ    ಕೌಶಲ್ಯಾಭಿವೃದ್ಧಿ ತರಬೇತಿಯ ತರಗತಿಗಳನ್ನು ಕೋವಿಡ್-19 ಕಾರಣದಿಂದಾಗಿ ಭೌತಿಕವಾಗಿ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಎಸ್‍ಒಯು ಕನೆಕ್ಟ್ ಪ್ಲಾಟ್‍ಫಾರ್ಮ್ ಮುಖಾಂತರ ಆನ್‍ಲೈನ್ ತರಗತಿಗಳನ್ನು ಜು. 03 ರಿಂದ ಜು. 14 ರವರೆಗೆ ನಡೆಸಲಾಗುವುದು.

ಕೌಶಲ್ಯಾಭಿವೃದ್ಧಿ ತರಬೇತಿಯ ಪಠ್ಯವಿಷಯ, ವೇಳಾಪಟ್ಟಿ ಮತ್ತು ತರಗತಿಗಳ ವೆಬ್ ಲಿಂಕ್ ಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಪಡೆದುಕೊಂಡ ವಿದ್ಯಾರ್ಥಿಗಳು, ಇ-ಡಿಜಿಟಲ್ ಪ್ರಮಾಣಪತ್ರಗಳನ್ನು ಆನ್‍ಲೈನ್ ಮೂಲಕ ವಿಶ್ವವಿದ್ಯಾಲಯದ ಅಂತರ್ಜಾಲದಲ್ಲಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಯೋಜನಾಧಿಕಾರಿ ಮೊ.ಸಂ. 9611434810 ಕ್ಕೆ ಸಂಪರ್ಕಿಸಬಹುದು.