ಬೆಂಗಳೂರು : ಇಂದಿನಿಂದ  ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯ ಮಾಪನ ಆರಂಭವಾಗಲಿದೆ.

ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದು, ಇಂದಿನಿಂದ ಬೆಂಗಳೂರು ನಗರ, ಗ್ರಾಮಾಂತರದಲ್ಲಿ ತಾತ್ಕಾಲಿಕವಾಗಿ ಹೊರತಾಗಿ, ಬೇರೆ ಜಿಲ್ಲೆಗಳಲ್ಲಿ ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಆರಂಭವಾಗಲಿದೆ.

ರಾಜ್ಯದ 228 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿದೆ. ಇಂತಹ ಮೌಲ್ಯ ಮಾಪನದಲ್ಲಿ, 71154 ಮೌಲ್ಯ ಮಾಪನ ಸಿಬ್ಬಂದಿಗಳು ಭಾಗಿಯಾಗಲಿದ್ದಾರೆ.