ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡು ದಿನಗಳ ರಾಜ್ಯ. ‘ಕರುನಾಡ ಜಾಗೃತಿ ಯಾತ್ರೆ’ ಎಂಬ ಹೆಸರಿನಲ್ಲಿ ರಾಜ್ಯ ಪ್ರವಾಸ ಮಾಡಲಿದ್ದಾರೆ.
ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೆ ಅವರು ಭೇಟಿ ನೀಡಲಿದ್ದು, ಲಿಂಗಾಯತ ಮಠಗಳಿಗೆ ಭೇಟಿನೀಡಲಿದ್ದಾರೆ. ಮಾ.26ರ ಬೆಳಗ್ಗೆ ಅಮಿತ್ ಶಾ ಬೆಂಗಳೂರಿಗೆ ಬಂದು, ಮೊದಲು ತುಮಕೂರಿಗೆ ಭೇಟಿ ನೀಡಲಿದ್ದಾರೆ. ಸೋಮವಾರ ತುಮಕೂರು, ತಿಪಟೂರು, ಶಿವಮೊಗ್ಗ, ತೀರ್ಥಹಳ್ಳಿಗೆ ಬೇಟಿ ನೀಡಲಿದ್ದಾರೆ.

ಕಾರ್ಯಕ್ರಮಗಳ ವಿವಿರ: 
ಮಾರ್ಚ್ 26 * ಬೆಳಗ್ಗೆ 9.40 : ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ
11 ರಿಂದ 12 : ತೆಂಗುಬೆಳೆಗಾರರ ಸಮಾವೇಶ ತಿಪಟೂರು.
1.20 ರಿಂದ 1.50 : ತೀರ್ಥಹಳ್ಳಿಯ ಕವಿಶೈಲಕ್ಕೆ ಭೇಟಿ
2.45 ರಿಂದ 3.45 : ತೀರ್ಥಹಳ್ಳಿಯಲ್ಲಿ ಅಡಿಕೆ ಬೆಳೆಗಾರರ ಸಮಾವೇಶ
4.30 ರಿಂದ 5.15 : ಶಿವಮೊಗ್ಗದಲ್ಲಿ ರೋಡ್ ಶೋ
6.20 ರಿಂದ 7.20 : ಉದ್ಯಮಿಗಳ ಜೊತೆ ಸಂವಾದ, ಶಿವಮೊಗ್ಗ.
7.30 ರಿಂದ 8.30 : ಬೆಕ್ಕಿನ ಕಲ್ಮಠಕ್ಕೆ ಭೇಟಿ
8.45 ಭೋಜನ ಮಾರ್ಚ್ 27 ರ ಬೆಳಗ್ಗೆ 10 ರಿಂದ 10.40 : ಮುಷ್ಠಿ ಧ್ಯಾನ ಅಭಿಯಾನದಲ್ಲಿ ಭಾಗಿ. ದೊಡ್ಡಬಾತಿ ದಾವಣಗೆರೆ
11.15 ರಿಂದ 11.45 : ಪತ್ರಿಕಾಗೋಷ್ಠಿ, ದಾವಣಗೆರೆ
12.30 ರಿಂದ 1.50 : ಸಿರಿಗೆರೆ ಮಠಕ್ಕೆ ಭೇಟಿ
1.50 ರಿಂದ 2.20 : ಮಾದರ ಚೆನ್ನಯ್ಯ ಮಠಕ್ಕೆ ಭೇಟಿ
2.30 ರಿಂದ 2.50 : ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ
3 ರಿಂದ 3.20 : ಮದಕರಿ ನಾಯಕ, ಒನಕೆ ಓಬವ್ವ ಪ್ರತಿಮೆಗೆ ಮಾಲಾರ್ಪಣೆ
3.30ರಿಂದ 4.30 : ಮೂರು ಜಿಲ್ಲೆಗಳ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶ
5 ರಿಂದ 6 : ಎಸ್.ಟಿ.ಸಮಾವೇಶ : ಚಳ್ಳಕೆರೆ.