ದಾವಣಗೆರೆ: ಇಂದಿಗೂ ಸಿದ್ದರಾಮಯ್ಯನವರೇ ನನಗೆ ಮುಖ್ಯ ಮಂತ್ರಿಗಳು ಅಂತ ಹೇಳಿದ್ದು, ಬೇರ್ಯಾರು ಅಲ್ಲ ದೋಸ್ತಿ ಸರಕಾರದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದು.

ನಗರದಲ್ಲಿ ಮಾತನಾಡಿದ ಅವರು, ಸಿಎಂ ಆಗಿ ಹೆಚ್.ಡಿ. ಕುಮಾರಸ್ವಾಮಿ‌ ಇದ್ರು ಸಹ, ನನಗೆ ಈಗಲು ಸಿದ್ದರಾಮಯ್ಯನವರೇ ಸಿಎಂ ಎಂದು ವಿಶೇಷ ಅಭಿಮಾನದಿಂದ ಹೇಳಿರುವುದಲ್ಲದೇ, .ಟಿಕೆಟ್ ಕೊಟ್ಟು ನನ್ನನ್ನು ಸಿದ್ದರಾಮಯ್ಯ ಗೆಲ್ಲಿಸಿದ್ದಾರೆ ಎಂದರು.

ನನ್ನ ಜೀವನದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾದರೆ ಸಾಕು ಅನ್ಕೊಂಡಿದ್ದೆ, ಆದರೆ ಸಚಿವನಾಗಿ ಮಾಡಿದ ಕೀರ್ತಿ ಸಿದ್ದರಾಮಯ್ಯರಿಗೆ ಸಲ್ಲುತ್ತದೆ ಹಾಗಾಗಿ ನನಗೆ ಈಗಲೂ ಸಿದ್ದರಾಮಯ್ಯರೇ ಮುಖ್ಯ ಮಂತ್ರಿಗಳು ಅಂತ ಹೇಳಿದ್ದು ಮಾತ್ರ ಕೆಲ ಮುಖಂಡರುಗಳಿಗೆ ಇರುಸು ಮುರುಸು ಉಂಟಾಗಿದೆ.