ಬೀದರ್: ಹಣ ಕೊಡುವ ತನಕ ಮತಹಾಕಲ್ಲ ಅಂತವರು ಸಿಗುತ್ತಾರೆ. ಯಾರು ಗೆದ್ರು ರಾಗಿ ಬೀಸೋದ ತಪ್ಪಲ್ಲ ನಾವೇಕೆ ಮತ ಹಾಕ ಬೇಕು ಹೀಗೆ ಹಲವಾರು ಸಬೂಬುಗಳನ್ನು ಹೇಳಿ ಮತಹಾಕದೇ ಇರುವವರು ನಮ್ಮ ಮುಂದೆ ಇದ್ದಾರೆ.

ಆದ್ರೆ ಇಲ್ಲೊಬ್ಬರು ಮನೆಯಲ್ಲಿ ಅಪ್ಪನ ಶವ ಇಟ್ಟುಕೊಂಡು ಮತಚಲಾಯಿಸಿದ ಅಪರೂಪದ ವ್ಯಕ್ತಿ ಇಲ್ಲಿದ್ದಾರೆ.

ಬಸವಕಲ್ಯಾಣದಲ್ಲಿ ವ್ಯಕ್ತಿಯೋರ್ವ ಮನೆಯಲ್ಲಿ ತಂದೆ ನಿಧನಗೊಂಡಿದರು ತಂದೆಯ ಶವ ಮನೆಯಲ್ಲಿ ಇಟ್ಟು ಮೊದಲು ಮತದಾನ ಮಾಡಿರುವ ಘಟನೆ ಬೀದರನ ಬಸವಕಲ್ಯಾಣದಲ್ಲಿ ನಡೆದಿದೆ.

ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದ ರಾಜಕುಮಾರ ಸ್ವಾಮಿ…ತಂದೆ ಬಸಯ್ಯಾ ಸ್ವಾಮಿ (೬೦) ನಿಧನ ಹೊಂದಿದ್ದಾರೆ. ಆದ್ರ ಮತಚಾಲಾಯಿಸ ಬೇಕು ಎಂದು ಅಪ್ಪನ ಶವ ಇದ್ದರೂ ಮಾಡಿದ ಮಗ.

ಇಂತವರನ್ನು ನೋಡಿಯಾದರೂ ಮತದಾನ ಮಹತ್ವ ಅರಿತುಕೊಳ್ಳಬೇಕಿದೆ.