ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹ ದಳವು ಶ್ರೀ ಹೆಚ್.ರಾಮಮೂರ್ತಿ ವಲಯ ಅರಣ್ಯ ಅಧಿಕಾರಿ, ಜಗಳೂರು, ದಾವಣಗೆರೆ ಜಿಲ್ಲೆ ಎಂಬುವವರು ತಮ್ಮ ಬಲ್ಲ ಮೂಲಗಳಿಂದ ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರು ವಾಸಿಸುತ್ತಿರುವ ಕೋಟೆ ರಸ್ತೆ ಚಿತ್ರದುರ್ಗ ನಿವಾಸ ಮತ್ತು ತರೀಕೆರೆ ಭಕ್ತನ ಕಟ್ಟೆಯ ತೋಟದ ಮನೆ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ವಲಯ ಅರಣ್ಯ ಅಧಿಕಾರಿಗಳ ಕಛೇರಿ ಜಗಳೂರು ಮೇಲೆ ದಾಳಿ ನಡೆಸಲಾಗಿರುತ್ತದೆ. ಶೋಧನಾ ಕಾರ್ಯವು ಮುಂದುವರೆದಿದ್ದು ಈವರೆಗೆ ಶೋಧನೆ ನಡಸಲಾದ ಸ್ಥಳಗಳಲ್ಲಿ ತನಿಖೆಯಲ್ಲಿ ಪತ್ತೆಯಾದ ಆರೋಪಿತ ಸರ್ಕಾರಿ ನೌಕರನ ಚರ ಮತ್ತು ಸ್ಥಿರ ಆಸ್ತಿಗಳ ವಿವರ ಈ ಕೆಳಕಂಡಂತಿರುತ್ತವೆ.
9 ನಿವೇಶನಗಳು, 35 ಎಕರೆ ಕೃಷಿ ಜಮೀನು, ಚಿನ್ನ 1 ಕೆಜಿ, ಬೆಳ್ಳಿ 600 ಗ್ರಾಂ, 1 ಸ್ಕಾರ್ಪಿಯೋ, 1 ಬೋಲೆರೋ, 1 ದ್ವಿಚಕ್ರ ವಾಹನ, ₹ 1.58 ಲಕ್ಷ ನಗದು ಮತ್ತು ₹ 18.18 ಲಕ್ಷ ಗೃಹೋಪಯೋಗಿ ವಸ್ತುಗಳು ಕಂಡು ಬಂದಿರುತ್ತದೆ.
ತನಿಖೆ ಮುಂದುವರೆದಿದ್ದು, ಆರೋಪಿತ ಸರ್ಕಾರಿ ನೌಕರನು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆೆ.