ಹುಬ್ಬಳ್ಳಿ: ಆರ್‌ಎಸ್‌ಎಸ್‌ ರಾಷ್ಟ್ರಾಭಿಮಾನಿ ಸಂಸ್ಥೆ ಆಗಿದ್ದರೆ ಈ ದೇಶದ ಎಲ್ಲ ಧರ್ಮಗಳಿಗೆ ಸಮಾನ ಗೌರವ ನೀಡಲಿ ಎಂದು  ಕೂಡಲ ಸಂಗಮದ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.

ನಿನ್ನೆ ಮಾಧ್ಯಮದವೊಂದಿಗೆ ಮಾತನಾಡಿದ ಅವರು ಆರ್.ಎಸ್.ಎಸ್. ನವರು ಕೇವಲ ರಾಮಜನ್ಮಭೂಮಿ ಬಿಡುಗಡೆಗೆ ಮಾತ್ರ ಹೋರಾಡದೆ ಲಿಂಗಾಯತ ಧರ್ಮದ ಮತ್ತು ಅನ್ಯ ಧರ್ಮಗಳ ಹಿತಕ್ಕಾಗಿಯೂ ಹೋರಾಡಬೇಕು ಎಂದು ಹೇಳಿದರು.

ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಅಲ್ಲ. ಲಿಂಗಾಯತ ಧರ್ಮ 12ನೆಯ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿ ಸ್ಥಾಪಿತವಾದ ಧರ್ಮವಾಗಿದೆ. ಲಿಂಗಾಯತರು ಮಾನ್ಯತೆ ಕೇಳಿದರೆ ಅದು ಭಿಕ್ಷೆ ಬೇಡಿದಂತೆ ಅಲ್ಲ ಎಂದು ಹೇಳಿದ ಅವರು ಸ್ವಂತ್ರ ಲಿಂಗಾಯಿತ ಧರ್ಮದ ಬಗ್ಗೆ ನಿರಂತರ ಹೋರಾಟಕ್ಕೆ ನಾವು ರೆಡಿ ಇದ್ದೇವೆ ಎಂದು ಹೇಳಿದರು.

ಗಿಯೂ ಹೋರಾಡಬೇಕು ಎಂದರು