ಚಿತ್ರದುರ್ಗ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ತಮ್ಮ ಬಜೆಟ್ ಭಾಷಣದಲ್ಲಿ ಕರ್ನಾಟಕದಲ್ಲಿ ಆರ್ಯವೈಶ್ಯ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಪ್ರಕಟಿಸಿರುವುದಕ್ಕೆ ನಗರದ ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್ ಕಾಶಿವಿಶ್ವನಾಥ ಶೆಟ್ಟರು ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಆರ್ಯವೈಶ್ಯ ಸಮಾಜದ ಬಹುದಿನಗಳ ಕನಸನ್ನು ನನಸಾಗಿಸಿದ ಮುಖ್ಯಮಂತ್ರಿಗಳನ್ನು ಅವರು ಅಭಿನಂದಿಸಿದ್ದಾರೆ.

ನಿಗಮದ ರಚನೆಗೆ ಶ್ರಮಿಸಿರುವ ಶಾಸಕ ಟಿ.ಎ ಶರವಣ ಮತ್ತು ಅವರ ಗೆಳೆಯರ ಬಳಗವನ್ನೂ ಸಹ ಅವರು ಅಭಿನಂದಿಸಿದ್ದಾರೆ. ಈ ನಿಗಮಕ್ಕೆ ಬಿಡುಗಡೆ ಮಾಡಿರುವ ೧೦ ಕೋಟಿ ರೂಗಳು ಅತಿ ಕಡಿಮೆ ಆಗಿದ್ದು ಅದನ್ನು ಹೆಚ್ಚಿಸಬೇಕು; ಕನಿಷ್ಠ ಬ್ರಾಹ್ಮಣರ ಅಭಿವೃದ್ಧಿ ನಿಗಮಕ್ಕೆ ಕೊಟ್ಟಿರುವ ೨೫ ಕೋಟಿ ರೂಗಳನ್ನಾದರೂ ನೀಡಬೇಕು, ಪೂರಕ ಬಜೆಟ್‌ನಲ್ಲಿ ಅದನ್ನು ಪ್ರಕಟಿಸಬೇಕೆಂದು ಮುಖ್ಯಮಂತ್ರಿಗಳನ್ನು ಅವರು ಪ್ರಾರ್ಥಿಸಿದ್ದಾರೆ.