ಚಿತ್ರದುರ್ಗ: ಇಡೀ ದೇಶವೇ ಕೊರೋನಾ ಮಹಾಮಾರಿಯಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಇದನ್ನು ತಡೆಯಲು ಲಾಕ್ಡೌನ್ ಹಾಗೂ ಹಲವು ರೀತಿಯ ಕಠಿಣ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ ಆದರೆ  ಸಾಮಾಜಿಕ ಅಂತರವನ್ನು ಕಡೆ ಗಣಿಸಿ ಕಾರ್ಯಕ್ರಮದಲ್ಲಿ ಭಾಗಿಯಾದ ಆರೋಗ್ಯ ಸಚಿವರ ಬಗ್ಗೆಚರ್ಚೆಗೆ ಗ್ರಾಸವಾಗಿದೆ.

ನಡೆದಿದ್ದು ಇಷ್ಟು,  ಚಿತ್ರದುರ್ಗ ಜಿಲ್ಲೆಯ ಪರಶುರಾಮಪುರದಲ್ಲಿ ವೇದಾವತಿ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಆರೋಗ್ಯ ಸಚಿವರಾದ ಬಿ.ಶ್ರೀರಾಮಲು ಅವರು ಹಾಗೂ ಅವರ ಜೊತೆ ಇದ್ದ ಶಾಸಕರು  ಯಾವುದೇ ಮುಖಗವಸು,ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಾವಿರಾರು ಜನರ ನಡುವೆ ನಡೆಸಿರುವುದರ ಬಗ್ಗೆ ಜನರಿಗೊಂದು ನ್ಯಾಯ, ಸಚಿವರಿಗೊಂದು ನ್ಯಾಯವೇ ಎಂದು ಜಿಲ್ಲಾ ಯಂತ್ರಾಂಗಕ್ಕೆ  ಜನರು ಪ್ರಶ್ನೆ ಮಾಡುತ್ತಿದ್ದಾರೆ.!

ಸಾಮಾನ್ಯ ನಾಗರೀಕರು ಯಾವುದೇ ಸಮಾರಂಭ ಮಾಡಲು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಮದುಗೆ 50 ಜನ , ಅಂತ್ಯ ಸಂಸ್ಕಾರಕ್ಕೆ 20ಜನ ಹಾಗೋ ಎಲ್ಲೇಡೆ ಸಾಮಾಜಿಕ ಅಂತರ ಹೀಗೆ ಹಲವು ನಿಯಮಗಳಿದ್ದು ಒಂದು ವೇಳೆ ಇವುಗಳನ್ನು ಅನುಸರಿಸದಿದ್ದರೆ ಕಾನೂನು ಕ್ರಮ ಜರುಗಿಸುವ ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ಏನನ್ನ ಬೇಕು ಎಂಬ ಪ್ರಶ್ನೆ…………