ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಆರನೇ ವೇತನ ಆಯೋಗದ ಶಿಫಾರಿಸಿನಂತೆ ಶೇ. 30 ರಷ್ಟು ಹೆಚ್ಚಳವಾಗಿದ್ದರೂ, ಈ ಹಣ ನೌಕರರ ಕೈಗೆ ಸಿಲು ತಾಂತ್ರಿಕ ಸಮಸ್ಯೆ ಅಡ್ಡಿಯಾಗಿದೆಯಂತೆ

ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ತಂತ್ರಾಂಶದಲ್ಲಿ ಪರಿಷ್ಕೃತ ವೇತನದ ವಿವರಗಳನ್ನು ದಾಖಲಿಸುವ ಪ್ರಕ್ರಿಯೆ ಮುಗಿಯದ ಕಾರಣ ಜೂನ್ ತಿಂಗಳ ಸಂಬಳ ಮಾಡಿಲ್ಲ. ಡೇಟಾ ಎಂಟ್ರಿ ಸಮಸ್ಯೆ ಕಾರಣ ಐದೂವರೆ ಲಕ್ಷ ನೌಕರರ ಸಂಬಳ ವಿಳಂಬವಾಗಲಿದೆಯಂತೆ

ಆದರೆ ಬಹುತೇಕ ಇಲಾಖೆಗಳಲ್ಲಿ ಪರಿಷ್ಕೃತ ವೇತನವನ್ನು ನೌಕರರ ಖಾತೆಗಳಿಗೆ ಜಮಾ ಮಾಡಲಾಗಿಲ್ಲ. ಜುಲೈ 9 ರ ನಂತರ ವೇತನ ಜಮಾ ಆಗುವ ಸಾಧ್ಯತೆ ಇದೆ ಎಂದು ಸರ್ಕಾರದ ಉನ್ನತ ಮೂಲಗಳಿಂದ ತಿಳಿದುಬಂದಿದೆ.