ಬೆಂಗಳೂರು : ಕೇಂದ್ರ ಸರ್ಕಾರವು ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದ್ದು, ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆ ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಜನವರಿ 1 ಜಾರಿಯಾಗಲಿದೆ.

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೆಲಸಕ್ಕೆ ವಲಸೆ ಹೋಗುವ ಜನರಿಗೆ ಇದರಿಂದ ಅನುಕೂಲವಾಗಲಿದೆ.

ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಕೆಲ ರಾಜ್ಯಗಳಲ್ಲಿ ಇನ್ನೂ ಹೆಚ್ಚು ಸಬ್ಸಿಡಿ ದರಗಳಲ್ಲಿ ಪಡಿತರವನ್ನು ನೀಡಲಾಗುತ್ತದೆ. ಅಂಥ ಸೌಲಭ್ಯವು ವಲಸೆಗಾರರಿಗೆ ಇರುವುದಿಲ್ಲ.

ಕೇಂದ್ರ ಸರ್ಕಾರದ ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆ ಜಾರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅನಿವಾರ್ಯ. ಹಾಗೆಯೇ ದೇಶದ ಎಲ್ಲಾ ಪಡಿತರ ಅಂಗಡಿಗಳಲ್ಲಿ ಪಾಯಿಂಟ್ ಆಫ್ ಸೇಲ್ ಮೆಷಿನ್ ಗಳ ಬಳಕೆ ಮಾಡಬೇಕಾಗುತ್ತದೆ. ಪಡಿತರ ಚೀಟಿದಾರರು `ಅಂತರರಾಜ್ಯ ಪೋರ್ಟೆಬಿಲಿಟಿ’ ಮೂಲಕ ಈ ರಾಜ್ಯಗಳಲ್ಲಿರುವ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ರಾಜ್ಯದ ರೇಷನ್ ಕಾರ್ಡ್ ಬಳಸಿ ಆಹಾರಧಾನ್ಯವನ್ನು ಸಬ್ಸಿಡಿ ದರದಲ್ಲಿ ಪಡೆಯಬಹುದು.

ಪ್ರತಿ ಫಲಾನುಭವಿ ಹೊರ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ನೀಡುವ 5 ಕೆ.ಜಿ. ಅಕ್ಕಿಯನ್ನು ಕೆ.ಜಿಗೆ ತಲಾ 3 ರೂ. ಹಣ ಪಾವತಿಸಿ ಖರೀದಿಸಬೇಕು ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.