ಬೆಂಗಳೂರು : ಬಸ್ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಪ್ರಯಾಣಿಕರ ರೈಲು ಸಂಚಾರ ಮಾದರಿಯಲ್ಲೇ ಆಯ್ದ ಜಿಲ್ಲೆಗಳಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆಗಳಿವೆ.

ರಾಜ್ಯದ ಹಸಿರು ವಲಯದ ಜಿಲ್ಲೆ ವ್ಯಾಪ್ತಿಯೊಳಗೆ ಕೆಎಸ್ ಆರ್ ಟಿಸಿ ಸೇವೆ ನೀಡುತ್ತಿದೆ. ಜೊತೆಗೆ ಸೇವಾ ಸಿಂಧು ವೆಬ್ ಪೋರ್ಟಲ್ ನಲ್ಲಿ ಇ-ಪಾಸ್ ಪಡೆದವರಿಗಾಗಿ ಅಂತಾರಾಜ್ಯ ಸೇವೆಗೆ ಚಾಲನೆ ನೀಡಲಾಗುತ್ತಿದೆ. ಹೀಗಾಗಿ ಆಯ್ದ ಜಿಲ್ಲೆಗಳಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇನ್ನು ನಮ್ಮ ಮೆಟ್ರೋ ರೈಲು ಸೇವೆ ಆರಂಭದ ಕುರಿತು ತೀರ್ಮಾನ ತೆಗೆದುಕೊಂಡಿಲ್ಲ. ಮೆಟ್ರೋ ರೈಲು ಹವಾನಿಯಂತ್ರಿತ ಸೇವೆಯಾದ ಕಾರಣ ಸದ್ಯಕ್ಕೆ ಆರಂಭ ಅನುಮಾನ ಎನ್ನಲಾಗುತ್ತಿದೆ.