ಬೆಂಗಳೂರು:ರಾಜ್ಯದ ಹಲವು ಜಿಲ್ಲಾ ಕೊವಿಡ್ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 1800 ಆಯುಷ್ ವೈದ್ಯರು ಇಂದು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂದು ಆಯುಷ್ ವೈದ್ಯರ ಸಂಘದ ಅಧ್ಯಕ್ಷ ಡಾ.ವಿಜಯ್ ಹೇಳಿದ್ದಾರೆ.

ಏಕೆಂದ್ರೆ ನಾವೂ ಕೂಡ ಎಂಬಿಬಿಎಸ್ ವೈದ್ಯರಂತೆಯೇ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೆ ಸರ್ಕಾರ ನಮಗೆ ಕೇವಲ 20,000 ರೂ. ವೇತನ ನೀಡುತ್ತಿದೆ ಇದರಿಂದ ವೇತನ ತಾರತಮ್ಯದಿಂದ  ಮನನೊಂದು ಆರೋಗ್ಯಾಧಿಕಾರಿಗಳಿಗೆ ರಾಜೀನಾಮೆ ಸಲ್ಲಿಸಿ, ಮನವಿ ಪತ್ರವನ್ನೂ ಸಲ್ಲಿಸಿದ್ದೇವೆ ಎಂದಿದ್ದಾರೆ.

(ಸಾಂದರ್ಭಿಕ ಚಿತ್ರ)