ಬೆಂಗಳೂರು: ಬಿಜೆಪಿ ಸರ್ಕಾರವನ್ನು ಇನ್ನಷ್ಟು ಭದ್ರಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದ ಆಪರೇಷನ್ ಕಮಲಕ್ಕೆ ವರಿಷ್ಠರು ಸಧ್ಯಕ್ಕೆ ಭೇಡ ಎಂದು ಹೇಳಿದ್ದಾರಂತೆ.

ಏಕೆಂದ್ರೆ ಈಗಾಗಲೇ ಅನರ್ಹಗೊಂಡಿರುವ ಶಾಸಕರ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿ ಇದೆ. ಕೋರ್ಟ್ ನಲ್ಲಿ ಇತ್ಯರ್ಥವಾಗುವವರೆಗೂ ಆಪರೇಷನ್ ಕಮಲ ಮಾಡುವುದು ಬೇಡ ಎಂದು ವರಿಷ್ಠರು ಹೇಳಿದ್ದಾರಂತೆ.

ಅಧಿಕಾರದ ಆಸೆಗಾಗಿ ಅನ್ಯ ಪಕ್ಷಗಳಿಂದ ಬಂದವರಿಗೆ ಮಣೆ ಹಾಕಿದರೆ ಪಕ್ಷದ ನಿಷ್ಠಾವಂತರು ಅಸಮಾಧಾನಗೊಳ್ಳಬಹುದು. ಇದು ತಿರುಗುಬಾಣ ಆಗಬಹು ದೆಂಬ ಹಿನ್ನೆಲೆಯಲ್ಲಿ ಸದ್ಯಕ್ಕೆ ಆಪರೇಷನ್ ಕಮಲ ಬೇಡ ಎಂದು ಹೇಳಿದ್ದಾರೆ. ಹಾಗಾಗಿ ಬೇರೆ ಪಕ್ಷದಿಂದ ಜಿಗಿತ ಮಾಡುವ ಶಾಸಕರುಗಳಿಗೆ ನಿರಾಸೆ ಯಾಗಿದೆ ಎಂಬುದು ಸುದ್ದಿ.!