ಚೆನ್ನೈ : ಆನ್‌ಲೈನ್ ಗೇಮಿಂಗ್ ಆಯಪ್‌ಗಳ ಪರ ಜಾಹೀರಾತಿನಲ್ಲಿ ಕಾಣಿಸಿಕೊಂಡು, ಆನ್‌ಲೈನ್ ಜೂಜಾಟಕ್ಕೆ ಉತ್ತೇಜನ ನೀಡುತ್ತಿರುವ ಆರೋಪ ಹೊತ್ತ ಹಲವಾರು ಚಿತ್ರನಟ-ನಟಿಯರು ಹಾಗೂ ಕ್ರಿಕೆಟ‌ ತಾರೆಯರಿಗೆ ಮದ್ರಾಸ್‌ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಚಿತ್ರನಟರಾದ ಸುದೀಪ್‌, ಪ್ರಕಾಶ್‌ ರಾಜ್‌, ತಮನ್ನಾ, ರಾಣಾ ದಗ್ಗುಬಾಟಿ, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ ಸೇರಿದಂತೆ ಹಲವರಿಗೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ನೋಟಿಸ್ ನೀಡಿದೆ. ಈ ನೋಟಿಸ್‌ಗೆ ವಕೀಲರ ಮೂಲಕ ಸ್ಪಷ್ಟನೆ ನೀಡುವಂತೆ ತಿಳಿಸಲಾಗಿದೆ.

ಮೊಹಮ್ಮದ್ ರಿಜ್ವಿ ಎಂಬುವವರು ಇವರ ವಿರುದ್ಧ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ.