ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಸುತ್ತಾ ಮುತ್ತಲ್ಲಿನ ಪ್ರದೇಶದಲ್ಲಿ ಕಾಡಾನೆಗಳು ಓಡಾಡುತ್ತಿದೆ ಇದರ ಬಗ್ಗೆ ಅರಣ್ಯ ಇಲಾಖೆ ಸರಿಯಾದ ರೀತಿಯ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುನ್ನು ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸುತ್ತಾ ಮುತ್ತಲ್ಲಿನ ಪ್ರದೇಶದಲ್ಲಿ ಕಾಡಾನೆಗಳು ಓಡಾಡುತ್ತಿವೆ ಎಂದು ಅರಣ್ಯ ಇಲಾಖೆಯವರ ಜವಾಬ್ದಾರಿ ಹೆಚ್ಚಾಗಿದೆ ಆನೆಗಳು ಗ್ರಾಮಗಳನ್ನು ಪ್ರವೇಶ ಮಾಡದಂತೆ ಎಚ್ಚರವಹಿಸಿ ಅವುಗಳನ್ನು ಓಡಿಸುವ ಕಾರ್ಯವನ್ನು ಮಾಡಬೇಕಿದೆ ಆದರೆ ಇಂದು ಬೆಳಿಗ್ಗೆ ಆಯಿತೋಳಿನಲ್ಲಿ ಆನೆ ಓರ್ವ ವ್ಯಕ್ತಿಯ ಮೇಲೆ ಧಾಳಿ ಮಾಡಿದ್ದರೂ ಸಹ ಆದರ ಬಗ್ಗೆ ಅಧಿಕಾರಿಗಳಿಗೆ ಅರಿವಿಲ್ಲ ನನಗೆ ಎಲ್ಲಿ ಎಂದು ಕೇಳುತ್ತಾರೆ ಎಂದರೆ ಇವರು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ ಎಂದು ಗೊತ್ತಾಗುತ್ತದೆ ಎಂದರು.
ಆನೆ ಗ್ರಾಮದ ಬಳಿಗೆ ಬಂದಾಗ ಅ ಗ್ರಾಮದ ಜನತೆಗೆ ಇದರ ಬಗ್ಗೆ ಮಾಹಿತಿ ನೀಡಿ ಎಚ್ಚರದಿಂದ ಇರುವಂತೆ ಹೇಳಬೇಕಿದೆ ಆದರೆ ಈ ಕೆಲಸವನ್ನು ಅಧಿಕಾರಿಗಳು ಮಾಡಿದಂತ ಕಾಣುತ್ತಿಲ್ಲ ಇದರ ಬಗ್ಗೆ ಮಾಹಿತಿ ಇಲ್ಲದ ಕಾಟಪ್ಪ ಆನೆಯ ಧಾಳಿಎಗ ತುತ್ತಾಗಿದ್ದಾನೆ. ಇನ್ನು ಮುಂದಾದರೂ ಅಧಿಕಾರಿಗಳು ಆನೆಗಳನ್ನು ಓಡಿಸುವ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಹೇಳಿದರು.
ಕಾಟಪ್ಪನ ಬಗ್ಗೆ ಮಾಹಿತಿ: ಇಂದು ಬೆಳಿಗ್ಗೆ ಸುಮಾರು ೯ ರಿಂದ ೧೦ರ ಸಮಯದಲ್ಲಿ ಗ್ರಾಮದ ಕಾಟಪ್ಪ (೬೦)ತನ್ನ ಹೊಲದಲ್ಲಿ ಬೆಳದಿದ್ದ ಅವರೆಕಾಯಿಯನ್ನು ಕಾಯುವ ಸಲುವಾಗಿ ಹೊಲದ ಕಡೆಗೆ ಹೋಗಿದ್ದಾರೆ, ಆದರೆ ಅಲ್ಲಿಂದ ಸ್ವಲ್ಪ ಸಮಯದಲ್ಲಿಯೆ ಆತನ ಮೇಲೆ ಅನೆಗಳು ಧಾಳಿ ಮಾಡಿದೆ. ಅನೆಯ ಧಾಳಿಯಿಂದಾಗಿ ಆತನ ಹೊಟ್ಟೆಯ ಮೇಲೆ ಹೆಚ್ಚಿನ ಅನಾಹುತವಾಗಿದ್ದು, ಕರಳು ಹೊರ ಬಂದಿದ್ದು, ಪ್ರಜ್ಞಾನಹೀನಾರಾಗಿದ್ದ ಅವರನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದು ಕೊಂಡು ಬರಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ತುರ್ತ ಚಿಕಿತ್ಸೆ ನೀಡಿದ ನಂತರ ಆವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಕಳುಹಿಸಲಾಗಿದೆ. ಮಂಗಳವಾರ ಸಂಜೆ ಗಾಯಗೊಂಡಿದ್ದ ರವಿ (೩೨) ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಆತನನ್ನು ಸಹಾ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಕಳುಹಿಸಲಾಗಿದೆ.