ಬೆಂಗಳೂರು: ವಿರೋಧದ ನಡುವೆಯೂ ರಾಜ್ಯ ಸರ್ಕಾರ ಶಾಸಕ ಆನಂದ್ ಸಿಂಗ್ ಬೇಡಿಕೆಯಂತೆ ನೂತನ ಜಿಲ್ಲೆ ಸ್ಥಾಪನೆಗೆ ಮುಂದಾಗಿದೆ.

ಈ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಸೇರಿ ಕೆಲ ತಾಲೂಕುಗಳನ್ನು ಒಳಗೊಂಡ ನೂತನ ಜಿಲ್ಲೆ ರಚನೆಗೆ ಶಿಫಾರಸ್ಸು ಮಾಡಿದ್ದಾರೆ.

ಈ ವರದಿ ಸಿಎಂಗೆ ತಲುಪಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಬಳ್ಳಾರಿ ಜಿಲ್ಲೆ ವಿಭಜನೆಗೆ ಕಂದಾಯ ಇಲಾಖೆಯ ಒಪ್ಪಿಗೆ ಇದೆ ಎಂದಿದ್ದಾರೆ. ಹಾಗಾದರೆ ಇನ್ನೇನು ಕೆಲ ದಿನ ಗಳಲ್ಲಿ ಹೊಸಪೇಟೆ ಹೊಸ ಜಿಲ್ಲೆ ಆಗಬಹುದಲ್ಲವೆ.?