ನವದೆಹಲಿ : ಆಧಾರ್ ಮತ್ತು ಪ್ಯಾನ್ ಅನ್ನು ಮುಂದಿನ ವರ್ಷದ ಮಾರ್ಚ್ 31 ಕ್ಕೆ ಲಿಂಕ್ ಮಾಡಲು ಸರ್ಕಾರ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.

ಕೊರೊನಾ 19 ಸಾಂಕ್ರಮಿಕ ಮತ್ತು ಅದರ ಪರಿಣಾಮವಾಗಿ ಉಂಟಾಗುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ. ಈಗಿನ ಸಮಯವನ್ನು ಅರ್ಥಮ ಮಾಡಿಕೊಂಡು ಮತ್ತು ಗಮನದಲ್ಲಿಟ್ಟುಕೊಂಡು ನಾವು ಪ್ಯಾನ್ -ಆಧಾರ್ ಲಿಂಕ್ ಅನ್ನು 2021 ಮಾರ್ಚ್ 31 ರ ವರೆಗೆ ಗಡುವನ್ನು ವಿಸ್ತರಿಸಿದ್ದೇವೆ ಎಂದು ಆಧಾಯ ತೆರಿಗೆ ಇಲಾಖೆ ಅಧಿಕೃತ ಟ್ವೀಟರ್ ಮೂಲಕ ತಿಳಿಸಿದೆ.