ಬೆಂಗಳೂರು: ಆಧಾರ್‌ ಕಾರ್ಡ್ ಕಳೆದು ಹೋಗಿದ್ದಲ್ಲಿ ಅದರ ಮರುಮುದ್ರಣಕ್ಕೆ ಕೋರುವ ಅವಕಾಶವನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ನೀಡಿದೆ.

ಕಾರ್ಡ್ ಮಾಡಿಸಿಕೊಳ್ಳುವಾಗ ನೀಡಲಾದ ಚೀಟಿಯಲ್ಲಿರುವ ನೋಂದಣಿ ಸಂಖ್ಯೆ ಇದ್ದಲ್ಲಿ, UIDAI ಜಾಲತಾಣಕ್ಕೆ ಭೇಟಿ ನೀಡಿ ಕಾರ್ಡ್‌ನ ಮತ್ತೊಂದು ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ 50 ರೂ.ಗಳ ಶುಲ್ಕವನ್ನು ತೆತ್ತರೆ 15 ದಿನಗಳ ಒಳಗೆ ನಿಮ್ಮ ಆಧಾರ್‌ ಕಾರ್ಡ್‌ ಮನೆ ಸೇರಲಿದೆ.