ನವದೆಹಲಿ: ತೆರಿಗೆ ಸಂಗ್ರಹಿಸುವ ಗುರಿ ಹಿಗ್ಗಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಹೊಸ ನಿಯಮಾವಳಿಗಳ ಸರಣಿ ಪ್ರಸ್ತಾವಗಳನ್ನು ಮುಂದಿಡಲಾಗಿದೆ. ವಿತ್ತ ಸಚಿವಾಲಯದಿಂದ ಪ್ರಸ್ತಾವ ಆಗಿರುವ ನಿಯಮಾವಳಿಗಳ ಪ್ರಕಾರ, ಈ ಕೆಳಕಂಡ ವ್ಯವಹಾರಗಳ ಮೇಲೆ ಆದಾಯ ತೆರಿಗೆ ಕಣ್ಗಾವಲು ಇರಿಸಲಿದೆ.

* ಶಿಕ್ಷಣಕ್ಕೆ ಸಂಬಂಧಿಸಿದ ಶುಲ್ಕ, ದೇಣಿಗೆ ಒಂದು ವರ್ಷದಲ್ಲಿ 1 ಲಕ್ಷ ಮತ್ತು ಮೇಲ್ಪಟ್ಟ ಮೊತ್ತ.

* ಒಂದು ವರ್ಷದಲ್ಲಿ 1 ಲಕ್ಷ ರುಪಾಯಿ ಮೇಲ್ಪಟ್ಟ ವಿದ್ಯುತ್ ಬಿಲ್.

* ದೇಶಿ ಅಥವಾ ವಿದೇಶಿ ಬಿಜಿನೆಸ್ ಕ್ಲಾಸ್ ವಿಮಾನ ಪ್ರಯಾಣ.

* 20 ಸಾವಿರ ರುಪಾಯಿ ಮೇಲ್ಪಟ್ಟ ಹೋಟೆಲ್ ಬಿಲ್ ಪಾವತಿ.

* 1 ಲಕ್ಷ ಮೇಲ್ಪಟ್ಟು ಖರೀದಿ ಮಾಡಿದ ಆಭರಣ, ಗೃಹಬಳಕೆ ವಸ್ತುಗಳು, ಪೇಂಟಿಂಗ್ಸ್, ಮಾರ್ಬಲ್ ಮುಂತಾದವು.

* ಚಾಲ್ತಿ ಖಾತೆಗೆ (ಕರೆಂಟ್ ಅಕೌಂಟ್) 50 ಲಕ್ಷ ರುಪಾಯಿ ಮೇಲ್ಪಟ್ಟ ಡೆಪಾಸಿಟ್ ಅಥವಾ ಜಮೆ.

* ಚಾಲ್ತಿ ಖಾತೆ ಹೊರತುಪಡಿಸಿದ್ದಕ್ಕೆ 25 ಲಕ್ಷ ರುಪಾಯಿ ಮೇಲ್ಪಟ್ಟ ಜಮೆ ಅಥವಾ ಡೆಪಾಸಿಟ್.

* ವರ್ಷಕ್ಕೆ 20 ಸಾವಿರ ರುಪಾಯಿ ಮೇಲ್ಪಟ್ಟ ಆಸ್ತಿ ತೆರಿಗೆ ಪಾವತಿ.

* 50 ಸಾವಿರ ರುಪಾಯಿ ಮೇಲ್ಪಟ್ಟ ಲೈಫ್ ಇನ್ಷೂರೆನ್ಸ್ ಪ್ರೀಮಿಯಂ ಪಾವತಿ.

* 20 ಸಾವಿರ ರುಪಾಯಿ ಮೇಲ್ಪಟ್ಟು ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಂ ಪಾವತಿ.

* ಷೇರು ವ್ಯವಹಾರ, ಡಿಮ್ಯಾಟ್ ಖಾತೆ ಹಾಗೂ ಬ್ಯಾಂಕ್ ಲಾಕರ್ ಗಳು.

“ಪಾರದರ್ಶಕ ತೆರಿಗೆ- ಪ್ರಾಮಾಣಿಕ ತೆರಿಗೆದಾರರಿಗೆ ಗೌರವ”ಕ್ಕೆ ಚಾಲನೆ

ಇದರ ಜತೆಗೆ ಯಾರು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದಿಲ್ಲವೋ ಅಂಥವರಿಗೆ ಹೆಚ್ಚಿನ ದರದ ಟಿಡಿಎಸ್ ಕಡಿತ ಮಾಡುವ ಯೋಜನೆಯೂ ಇದೆ. ಮೂವತ್ತು ಲಕ್ಷ ಮೇಲ್ಪಟ್ಟ ಬ್ಯಾಂಕ್ ವ್ಯವಹಾರ ಇರುವವರು ಕಡ್ಡಾಯವಾಗಿ ಐಟಿಆರ್ ಫೈಲ್ ಮಾಡಬೇಕು. ಎಲ್ಲ ವೃತ್ತಿಪರರು ಹಾಗೂ ವ್ಯಾಪಾರ ವ್ಯವಹಾರ ಐವತ್ತು ಲಕ್ಷಕ್ಕೂ ಹೆಚ್ಚು ವಹಿವಾಟು ಹಾಗೂ 40 ಸಾವಿರ ರುಪಾಯಿಗೂ ಹೆಚ್ಚು ಬಾಡಿಗೆ ಪಾವತಿಸುತ್ತಿದ್ದಲ್ಲಿ ಕಡ್ಡಾಯವಾಗಿ ಐಟಿಆರ್ ಫೈಲ್ ಮಾಡಬೇಕು.