ನವದೆಹಲಿ : ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರ ಸರ್ಕಾರವು ಬಹುಮುಖ್ಯ ಮಾಹಿತಿಯೊಂದನ್ನು ನೀಡಿದ್ದು, 2019-20 ನೇ ಸಾಲಿನ ಆದಾಯ ತೆರಿಗೆ ಪಾವತಿ ಸಂಬಂಧ ಕೇಂದ್ರ ಸರ್ಕಾರ ಹೊಸ ಐಟಿಆರ್ ಗಳನ್ನು ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರದ ಐಟಿಆರ್ ಅನ್ವಯ ಚಾಲ್ತಿ ಖಾತೆಯಲ್ಲಿ 1 ಕೋಟಿ ರೂ. ಗಿಂತ ಹೆಚ್ಚಿನ ಠೇವಣಿ ಇಟ್ಟವರು ಮತ್ತು ವಾರ್ಷಿಕ 1 ಲಕ್ಷ ರೂ. ಗಿಂತ ಹೆಚ್ಚಿನ ವಿದ್ಯುತ್ ಬಿಲ್ ಪಾವತಿ ಮಾಡುವವರು ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.

ಕೇಂದ್ರ ಸರ್ಕಾರ ಸಹಜ್ (ಐಟಿಆರ-1) ಫಾರ್ಮ್ ಐಟಿಆರ್ -2, ಫಾರ್ಮ್ ಐಟಿಆರ್-3 ಸುಗಮ್, ಐಟಿಆರ್-5, ಐಟಿಆರ್ -6 ಐಟಿಆರ್-7 ಮತ್ತು ಫಾರ್ಮ್ ಐಟಿಆರ್-ವಿಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಚಾಲ್ತಿ ಖಾತೆಯಲ್ಲಿ 1 ಕೋಟಿ ರೂ. ಗಿಂತ ಹೆಚ್ಚಿನ ಠೇವಣಿ ಇಟ್ಟವರು ಮತ್ತು ವಾರ್ಷಿಕ 1 ಲಕ್ಷ ರೂ. ಗಿಂತ ಹೆಚ್ಚಿನ ವಿದ್ಯುತ್ ಬಿಲ್ ಪಾವತಿ ಮಾಡುವವರು ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.