ಬೆಂಗಳೂರು: ಆದಾಯ ತೆರಿಗೆ ಕಾಯಿದೆ ಉಲ್ಲಂಘನೆ ಮಾಡಿದ ಸಲುವಾಗಿ ಬಳ್ಳಾರಿಯ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಸಂತೋಷ್ ಲಾಡ್ ಅವರ ಸಂಬಂಧಿ ವಿಶ್ವಾಸ್ ಲಾಡ್ ಎನ್ನುವವರಿಗೆ ಬೆಂಗಳೂರಿನ ಆರ್ಥಿಕ ಅಪರಾಧ ನ್ಯಾಯಾಲಯ ನಾಲ್ಕು ವರ್ಷಗಳ ಶಿಕ್ಷೆ ಹಾಗೂ 2 ಲಕ್ಷ ದಂಡವನ್ನು ವಿಧಿಸಿದೆ.

ತೆರಿಗೆ ಪಾವತಿ ಸಂಬಂಧ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ತೆರಿಗೆ ಇಲಾಖೆಗೆ ವಂಚನೆ ಮಾಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆದಿತ್ತು. ಇದೇ ವೇಳೆ ತೆರಿಗೆ ಕಾಯಿದೆ 276c ಮತ್ತು 277ರ ಪ್ರಕಾರ ವಿಶ್ವಾಸ್ ಲಾಡ್ ಗೆ ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯ ತೀರ್ಪು ನೀಡಿದೆ. ಇನ್ನು ತೆರಿಗೆ ಕಳ್ಳರಿಗೆ ನೀಡಿರುವ ತೀರ್ಪಿಗೆ ಸಂಬಂಧಪಟ್ಟಂತೆ ಕರ್ನಾಟಕದ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ತೀರ್ಪು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶ್ವಾಸ್ ಲಾಡ್ ತೆರಿಗೆಯನ್ನು ವಂಚಿಸಿರುವುದು ಕಂಡು ಬಂದ ಹಿನ್ನಲೆಯಲ್ಲಿ ನ್ಯಾ. ಎಂ.ಎಸ್ ಅಳ್ವ ಅವರು ಆರೋಪಿ ವಿಶ್ವಾಸ್ ಲಾಡ್ ಗೆ ನಾಲ್ಕು ವರ್ಷಗಳ ಶಿಕ್ಷೆ ಹಾಗೂ 2 ಲಕ್ಷ ದಂಡವನ್ನು ವಿಧಿಸಿ ಆದೇಶಿಸಿದ್ದಾರೆ.  ಆದಾಯ ತೆರಿಗೆ ಕಟ್ಟದಿದ್ದವರು ತೆರಿಗೆ ಕಟ್ಟಿ ಶಿಕ್ಷೆ ಆಗದಂತೆ ನೋಡಿಕೊಳ್ಳಿ ಅಂತ ಸಂದೇಶ ಇರಬಹುದೇ.?