ಚಿತ್ರದುರ್ಗ: ಚಿತ್ರದುರ್ಗ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿನ ಪ್ರಾಣಿಗಳನ್ನು ಸಾರ್ವಜನಿಕರು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಚಿತ್ರದುರ್ಗ ವಿಭಾಗದ ವ್ಯಾಪ್ತಿಗೆ ಒಳಪಡುವ ಆಡುಮಲ್ಲೇಶ್ವರ ಕಿರು ಮೃಗಾಲಯವು ವಿವಿಧ ವನ್ಯ ಪ್ರಾಣಿಗಳಿಂದ ಕೂಡಿದ್ದು, ಕೇಂದ್ರೀಯ ಮೃಗಾಲಯ ಪ್ರಾಧಿಕಾರ, ನವದೆಹಲಿ ಅವರ ಆಡಳಿತಕ್ಕೆ ಒಳಪಟ್ಟಿರುವ ಎಲ್ಲಾ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ದತ್ತು ಪಡೆದವರು ನೀಡುವ ಹಣವು ಪ್ರಾಣಿಗಳಿಗೆ ಆಹಾರ, ವೈದ್ಯಕೀಯ ಮತ್ತು ನಿರ್ವಹಣೆಗೆ ಬಳಸಿಕೊಳ್ಳಲಾಗುವುದು. ಈ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ 80(ಜಿ) ಅಡಿಯಲ್ಲಿ ತೆರಿಗೆ ವಿನಾಯಿತಿಯೂ ಇರುತ್ತದೆ.

ದತ್ತು ಪಡೆಯಲು ಆಸಕ್ತಿವುಳ್ಳ ಪ್ರಾಣಿ ಪ್ರಿಯರು ಉಪ ಅರಣ್ಯ ಸಂರಕ್ಷಣಾಧಿಕಾರಿ (ಇಡಿ) 9449863633, ವಲಯ ಅರಣ್ಯಾಧಿಕಾರಿ (ಮೃಗಾಲಯ) 9449005522, ಅಥವಾ ಕಚೇರಿ ದೂರವಾಣಿ ಸಂಖ್ಯೆ 08194-230402 ಕ್ಕೆ ಸಂಪರ್ಕಿಸಬಹುದು.

94 ಪ್ರಾಣಿಗಳು ದತ್ತು ಸ್ವೀಕಾರಕ್ಕೆ ಲಭ್ಯ:

ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ದತ್ತು ಸ್ವೀಕಾರಕ್ಕೆ ಲಭ್ಯವಿರುವ ಪ್ರಾಣಿ ಪಕ್ಷಿಗಳ ವಿವರ ಇಂತಿದೆ. 7 ಚಿರತೆ, 4 ನರಿ, 14 ಕೃಷ್ಣಮೃಗ, 5 ನೀಲ್ಗಾಯ್, 6 ಜಿಂಕೆ, 14 ಫೀಸಂಟ್ರಿಸ್, 20 ಬಡ್ಗೆರೀಸ್ ಪಕ್ಷಿಗಳು, 3 ಕಾಕ್‍ಟೈಲ್, 3 ಕರಡಿ, 4 ಎಮು ಪಕ್ಷಿ, 2 ಹೆಬ್ಬಾವು, 2 ಮೊಸಳೆ ಹಾಗೂ 10 ಆಮೆಗಳು ಲಭ್ಯ ಇವೆ ಎಂದು ಆಡುಮಲ್ಲೇಶ್ವರ ಕಿರು ಮೃಗಾಲಯ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಚಿತ್ರದುರ್ಗ ವಿಭಾಗ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಚಂದ್ರಶೇಖರ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.