ಚಿತ್ರದುರ್ಗ :ನಗರದಲ್ಲಿ ಭೂಮಿ ಸಿಗದಿರುವುದಕ್ಕೆ ತಾಲ್ಲೂಕಿನಲ್ಲಿ ಆಡಳಿತವನ್ನು ನಡೆಸುತ್ತಿರುವವರು ರಿಯಲ್ ಎಸ್ಟೇಟ್ ದಂಧೆಯನ್ನು ನಡೆಸುತ್ತಿರುವುದರಿಂದ ಬಡವರಿಗೆ ಇದುವರೆವಿಗೂ ಮನೆ ಅಥವಾ ನಿವೇಶನ ಸಿಕ್ಕಿಲ್ಲ ಎಂದು ಪ್ರಾಧಿಕಾರದ ಅಧ್ಯಕ್ಷ ಜಗದೀಶ ಆರೋಪಿಸಿದರು.
ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಡಿಸ್ಟ್ರಿಕ್ ಸೆಕ್ಯೂರಿಟಿ ಎಂಪ್ಲಾಯಿಸ್ ಯೂನಿಯನ್ ಜಿಲ್ಲಾ ಕೇಂದ್ರ ಸಂಘಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಜನತೆಯಿಂದ ಭೂಮಿಯನ್ನು ಖರೀದಿ ಮಾಡುವುದರ ಮೂಲಕ ಹೆಚ್ಚಿನ  ದರಕ್ಕೆ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದಾರೆ ಇದರಿಂದ ಬಡಜನತೆಗೆ ಅನುಕೂಲವಾಗುವುದಿಲ್ಲ ಎಂದರು.
ನಗರ ಆಶ್ರಯ ಮನೆಗಳಿಗಾಗಿ ೨೦೦೧ರಿಂದ ಜನತೆ ಅರ್ಜಿಯನ್ನು ಹಾಕಿದ್ಧಾರೆ ಆದರೆ ಅವರಿಗೆ ಮನೆ ಅಥವಾ ನಿವೇಶನ ಕೊಡಲು ಚಿತ್ರದುರ್ಗ ನಗರದ ಸುತ್ತಾ-ಮುತ್ತಾ ಸರ್ಕಾರದ ಜಮೀನು ಇಲ್ಲ, ಯಾರು ಸಹಾ ಮಾರಾಟ ಮಾಡುತ್ತಿಲ್ಲ ಇದರಿಂದ ಜನತೆಗೆ ಮನೆಯನ್ನು ನೀಡಲಾಗುತ್ತಿಲ್ಲ ಎಂದ ಅವರು,  ಜಾಲಿಕಟ್ಟೆ ಗ್ರಾಮದ ಬಳಿಯಲ್ಲಿ ಸಕಾರದ ೪೨ ಎಕರೆ ಭೂಮಿ ಇದೆ ಆದನ್ನು ನಮ್ಮ ವಶಕ್ಕೆ ನೀಡಿದರೆ ಮನೆ ಅಥವಾ ನಿವೇಶನಗಳನ್ನು ನೀಡಲಾಗುವುದು ಇದರ ಬಗ್ಗೆ ಸಂಸದರು ಗಮನ ನೀಡುವಂತೆ ಜಗದೀಶ್ ಮನವಿ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ಎನ್.ಚಂದ್ರಪ್ಪ ಸಾರ್ವಜನಿಕರ ಆಸ್ತಿ, ಮಾನ, ಪ್ರಾಣವನ್ನು ಕಾಪಾಡುವ ಜನತೆಗೆ ಸರಿಯಾದ ರೀತಿಯ ಭದ್ರತೆ ಇಲ್ಲದಾಗಿದೆ. ಕನಿಷ್ಠ ವೇತನ ಇಲ್ಲದೆ ಕಡಿಮೆ ವೇತನಕ್ಕೆ ರಾತ್ರಿ ಹಗಲು ದುಡಿಯುತ್ತಾ ಶ್ರಮ ಜೀವಿಗಳಾಗಿದ್ದಾರೆ. ಸಂಘಟನೆಯಾಗುವುದರ ಮೂಲಕ ನಿಮ್ಮ ಬೇಡಿಕೆಯನ್ನು ಈಡೇರಿಸುವ ಕಾರ್ಯವನ್ನು ಯಾವುದೆ ರೀತಿಯ ಸಂರ್ಘಕ್ಕೆ ಒಳಗಾಗದೆ ಶಾಂತಿಯ ಮೂಲಕ ಮಾಡಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಫಾತ್ಯರಾಜನ್, ನ್ಯಾಯವಾದಿಗಳಾದ ಶಿವುಯಾದವ್, ಡಿಸ್ಟ್ರಿಕ್ ಸೆಕ್ಯೂರಿಟಿ ಎಂಪ್ಲಾಯಿಸ್ ಯೂನಿಯನ್ ಜಿಲ್ಲಾ ಅಧ್ಯಕ್ಷ ನಾಗರಾಜ್ ಶ್ಯಾನುಬೋಗ್ ಭಾಗವಹಿಸಿದ್ದರು