ನವದೆಹಲಿ: ಆಟೋಮೊಬೈಲ್ ಉದ್ಯಮ ಕುಸಿತಕ್ಕೆ ಓಲಾ ಮತ್ತು ಉಬರ್ ಕಾರಣ ಎಂದು ಹೇಳಿದ ಹಣಕಾಸು ಸಚಿವರ ಹೇಳಿಕೆ ತಪ್ಪು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ದೆಹಲಿಯಲ್ಲಿ ಆಟೋಮೊಬೈಲ್ ಕುಸಿತಕ್ಕೆ ಹಲವು ಕಾರಣಗಳಿವೆ. ಇ-ರಿಕ್ಷಾಗಳಿಂದ ಐಸಿಇ ಆಟೋರಿಕ್ಷಾಗಳ ಖರೀದಿ ಕಡಿಮೆಯಾಗಿದೆ.

ಅದೇ ರೀತಿ ದೇಶಾದ್ಯಂತ ಸಾರ್ವಜನಿಕ ಸಾರಿಗೆ ಸುಧಾರಣೆ ಕೊಡುಗೆಯೂ ಸಹ ಇದೆ. ಈ ಉದ್ಯಮ ಕುಸಿಯಲು ಓಲಾ-ಉಬರ್ ಬಳಕೆಯೂ ಸಹ ಒಂದು ಕಾರಣ ಎಂದು ವಿತ್ತ ಸಚಿವರು ಹೇಳಿದ್ದಾಗಿ ಅವರ ಹೇಳಿಕೆ ಸರಿದೂಗಿಸಿದ್ದಾರೆ.