ಚಿತ್ರದುರ್ಗ: ಕರ್ನಾಟಕ ವಿಧಾನಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಜೂನ್ 8 ರಂದು ಮತದಾನ ನಡೆದಿದ್ದು ಚಿತ್ರದುರ್ಗ ಜಿಲೆಯಲ್ಲಿ ಆರು ವಿಧಾನಸಭೆ ಕ್ಷೇತ್ರಗಳು ಸೇರಿ ಒಟ್ಟು 95.59 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನ ತಿಳಿಸಿದ್ದಾರೆ.
ಮೊಳಕಾಲ್ಮೂರು 204 ಪುರುಷರು, 33 ಮಹಿಳೆಯರು ಸೇರಿ ಒಟ್ಟು 237 ಜನರು ಮತ ಚಲಾಯಿಸಿದ್ದು ಶೇ.96.73 ರಷ್ಟು ಮತದಾನವಾಗಿದೆ. ಚಳ್ಳಕೆರೆ 574 ಪುರುಷರು, 131 ಮಹಿಳೆಯರು ಸೇರಿ ಒಟ್ಟು 705 ಜನರು ಮತ ಚಲಾಯಿಸಿದ್ದು ಶೇ.95.79 ರಷ್ಟು ಮತದಾನವಾಗಿದೆ. ಚಿತ್ರದುರ್ಗ 471 ಪುರುಷರು, 206 ಮಹಿಳೆಯರು ಸೇರಿ ಒಟ್ಟು 677 ಜನರು ಮತ ಚಲಾಯಿಸಿದ್ದು ಶೇ.96.44 ರಷ್ಟು ಮತದಾನವಾಗಿದೆ ಹಾಗೂ ಇನ್ನೊಂದು ಕೇಂದ್ರದಲ್ಲಿ 330 ಪುರುಷರು, 165 ಮಹಿಳೆಯರು ಸೇರಿ ಒಟ್ಟು 495 ಜನರು ಮತ ಚಲಾಯಿಸಿದ್ದು ಶೇ.93.05 ರಷ್ಟು ಮತದಾನವಾಗಿದೆ.
ಹೊಳಲ್ಕೆರೆ 333 ಪುರುಷರು, 71 ಮಹಿಳೆಯರು ಸೇರಿ ಒಟ್ಟು 404 ಜನರು ಮತ ಚಲಾಯಿಸಿದ್ದು ಶೇ.94.39 ರಷ್ಟು ಮತದಾನವಾಗಿದೆ. ಹಿರಿಯೂರು 451 ಪುರುಷರು, 139 ಮಹಿಳೆಯರು ಸೇರಿ ಒಟ್ಟು 590 ಜನರು ಮತ ಚಲಾಯಿಸಿದ್ದು ಶೇ.96.25 ರಷ್ಟು ಮತದಾನವಾಗಿದೆ ಹಾಗೂ ಹೊಸದುರ್ಗ 455 ಪುರುಷರು, 98 ಮಹಿಳೆಯರು ಸೇರಿ ಒಟ್ಟು 553 ಜನರು ಮತ ಚಲಾಯಿಸಿದ್ದು ಶೇ.96.34 ರಷ್ಟು ಮತದಾನವಾಗಿದೆ.