ಚಿತ್ರದುರ್ಗ:  ಜಿಲ್ಲೆ ಹಿರಿಯೂರು ನಗರದ 15 ನೇ ವಾರ್ಡ್ ನಲ್ಲಿ  ಬಾಳೆ ಸೇರಿ 4 ಲಕ್ಷ ಮೌಲ್ಯದ ವಸ್ತು ಸುಟ್ಟ ಕರಕಲಾದ ಘಟನೆ ನಡೆದಿದೆ.

ವೀರೇಶ ಎಂಬುವವರಿಗೆ ಸೇರಿದ ಬಾಳೆಕಾಯಿ ಮಂಡಿ ಇದಾಗಿದ್ದು, ಆಕಸ್ಮಿಕ ಬೆಂಕಿಯಿಂದ  ಬಾಳೆಕಾಯಿ ಮಂಡಿ ಮತ್ತು ಬಾಳೆ ಮಂಡಿ ಪಕ್ಕದಲ್ಲಿ ನಾಲ್ಕು ದ್ವೀಚಕ್ರ ವಾಹನ ಬೆಂಕಿಗೆ ಅಹುತಿಯಾಗಿದ್ದು ಬೈಕ್ ಗಳು ಸಂಪೂರ್ಣ ಭಸ್ಮವಾಗಿದೆ.

ಆಗ್ನಿಶಾಮಕವರು ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಮುಂದಾಗಿದ್ದಾರೆ. ನಗರಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.