ಚಿತ್ರದುರ್ಗ: ಆಂತರಿಕ ಭದ್ರತಾ ಪಡೆಯ ವಶದಲ್ಲಿದ್ದ ಆರೋಪಿಯೊಬ್ಬರು ಮೃತಪಟ್ಟಿದ್ದು, ಪೊಲೀಸರ ವಿರುದ್ಧ ಲಾಕಪ್‌ಡೆತ್‌ ಆರೋಪ ಕೇಳಿಬಂದಿದೆ.!

ನಗರದ ಅಗಳೇರಿ ಬಡಾವಣೆಯ ಶಿವಾಜಿರಾವ್ (47) ಮೃತ ವ್ಯಕ್ತಿ. ಗಾಂಜಾ ಮಾರಾಟ ಆರೋಪದ ಮೇರೆಗೆ ಮಂಗಳವಾರ ಸಂಜೆ ಪೊಲೀಸರು ವಶಕ್ಕೆ ಪಡೆದಿದ್ದರು.

ಪೊಲೀಸರು ಮನೆಗೆ ಬಂದು ಪತಿಯನ್ನು ಬಂಧಿಸಿದ್ದರು. ರಾತ್ರಿ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ. ಚಿತ್ರಹಿಂಸೆ ನೀಡಿ ಲಾಕಪ್‌ಡೆತ್‌ ಮಾಡಲಾಗಿದೆ’ ಎಂದು ಶಿವಾಜಿರಾವ್‌ ಪತ್ನಿ ಗೀತಾಬಾಯಿ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.