ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ,ನ9ರಂದು “ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ” ಪ್ರಯುಕ್ತ “ಕಾನೂನು ಅರಿವು ನೆರವು”ಕಾಯ೯ಕ್ರಮ ಜರುಗಿತು.ಕಾಯ೯ಕ್ರಮ ಉದ್ಘಾಟಿಸಿದ ಹಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾಸಮಿತಿ ಅಧ್ಯಕ್ಷರಾದ ಕೆ.ಎ.ನಾಗೇಶರವರು ಮಾತನಾಡಿದರು,ಕಾನೂನು ಪ್ರಧಿಕಾರ ಅಶಕ್ತರಿಗೆ ಉಚಿತವಾಗಿ ಕಾನೂನಿನ ಅರಿವು ನೆರವು ನೀಡಿ, ಶಕ್ತರನ್ನಾಗಿಸಿ ಅವರ ಬಾಳಿನ ಆಶಾಕಿರಣವಾಗಿ ಪರಿಣಾಮ ಬೀರಲಿದೆ.ಪ್ರತಿಯೊಬ್ಬರೂ ಕಾನೂನಿ ಅರಿವು ಹೊಂದಬೇಕಿದೆ,ಈ ನಿಟ್ಟಿನಲ್ಲಿ ಆಶಾಕಾಯ೯ಕತ೯ರು ಹಾಗೂ ಸ್ಥಳೀಯ ಸಕಾ೯ರಿ ಅರೆಸಕಾ೯ರಿ ಸಂಘ ಸಂಸ್ಥೆಗಳ ಕಾಯ೯ಕತ೯ರ ಪಾತ್ರ ಪ್ರಮುಖದ್ದಾಗಿದೆ.ಪ್ರಾಧೀಕಾರವು ಸ್ಥಳೀಯ ತಾಲೂಕು,ಜಿಲ್ಲೆ,ರಾಜ್ಯ,ರಾಷ್ಟ್ರಮಟ್ಟದಲ್ಲಿ ತನ್ನ ವ್ಯಾಪ್ತಿಯನ್ನ ಹೊಂದಿದೆ. ಜನಸಾಮಾನ್ಯರಿಗೆ ಉಚಿತ ಕಾನೂನು ಅರಿವು ನೀಡಿ, ಉಚಿತ ಕಾನೂನು ನೆರವು ನೀಡುವಲ್ಲಿ ಸೇವೆಸಲ್ಲಿಸುತ್ತಿದೆ ಎಂದರು. ಕಿ.ಶ್ರೇ.ನ್ಯಾಯಾಧೀಶರು ಹಾಗೂ ಕಾ.ಸೇ.ಸಮಿತಿ ಸದಸ್ಯ ಕಾಯ೯ದಶಿ೯ ಮುರುಗೇಂದ್ರ ತುಬಾಕೆ ರವರು,ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಕ್ಕಳು ಮಹಿಳೆಯರು,ಪರಿಶಿಷ್ಟ ಜಾತಿ ಪರಿಶಿಷ್ಟ ವಗ೯ದ ಜನ,ಆಥಿ೯ಕ ಸಂಕಷ್ಟದಲ್ಲಿರುವರು,ಪ್ರಾಕೃತಿಕ ಹಾನಿಗೋಳಗಾದವರು ಉಚಿತ ಕಾನುನು ನೆರವು ಪಡೆಯಬಹುದಾಗಿದೆ.ಮನುಷ್ಯ ಹುಟ್ಟಿನಿಂದ ಸಾಯೋವರೆಗೂ ಕಾನೂನಿನ ನೆರವು ಪ್ರತಿಯೊಬ್ಬರಿಗೂ ಅನಿವಾಯ೯,ಕಾರಣ ಪ್ರತಿಯೊಬ್ಬರೂ ಉಚಿತ ಕಾನೂನು ಸಲಹೆ ಹೊಂದಬೇಕಿದೆ,ಈ ನಿಟ್ಟಿನಲ್ಲಿ ಪ್ರಜ್ಞಾವಂತರು ಪ್ರತಿಯೊಬ್ಬರಲ್ಲಿ ಜಾಗ್ರತೆ ಮೂಡಿಸಬೇಕಿದೆ ಎಂದರು.ಪ್ಯಾನಲ್ ವಕೀಲರು ಹಾಗೂ ಹೋರಾಟಗಾರರಾದ ಸಿ.ವಿರುಪಾಕ್ಷಪ್ಪ “ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ” ಸಂಬಂಧಿಸಿದಂತೆ ಉಪನ್ಯಾಸ ನೀಡಿದರು.ದುಬ೯ಲರಿಗೆ ಉಚಿತ ಕಾನೂನು ಸಲಹೆ ಹಾಗೂ ಸಕಾ೯ರಿ ಸೌಲಭ್ಯಗಳ ನೆರವು ಒದಗಿಸುವುದಕ್ಕಾಗಿ,ಸಮಿತಿ1987ರಂದು ನಿಮಾ೯ಣವಾಗಿ 9ನೇ ನವಂಬರ್ 1995ರಂದು ಜಾರಿತರಲಾಯಿತು.ದುಬ೯ ೯ ವಗ೯ದವರಿಗೆ ಕಾನೂನಿನ ಅರಿವು ನೆರವು ನೀಡಲಿಕ್ಕಾಗಿ,ಕಾನೂನು ಸೇವೆಗಳ ಪ್ರಾಧಿಕಾರ ಅಗತ್ಯ ಸಿಬ್ಬಂದಿ ನೇಮಿಸಿ ಸೂಕ್ತ ಕ್ರಮಗಳನ್ನು ಜಾರಿತಂದಿದೆ, ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕಿದೆ ಎಂದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ ಮಾತನಾಡಿದರು.ಸಹಾಯಕ ಸಕಾ೯ರಿ ಅಭಿಯೋಜಕರಾದ ಹೊಸವಡ್ರು ಅಣ್ಣೇಶ ವೇದಿಕೆಯಲ್ಲಿದ್ದರು.ವಕೀಲರಾದ ಜಿ.ಎಂ.ಮಲ್ಲಿಕಾಜು೯ನಯ್ಯ ಸ್ವಾಗತಿಸಿ ನಿರೂಪಿಸಿದರು,ವಕೀಲರಾದ ಬಿ.ಸಿದ್ದಲಿಂಗಪ್ಪ ವಂದಿಸಿದರು.ಸ್ಥಳೀಯ ಆಡಳಿತಗಳ ಸಿಬ್ಬಂದಿಯವರು,ಆಶಾಕಾಯ೯ಕತ೯ರು,ಅಂಗನವಾಡಿ ಮೇಲ್ವಿಚಾರಕರು,ಗ್ರಾಮಪಂಚಾಯ್ತಿ ಸೇರಿದಂತೆ ವಿವಿದ ಇಲಾಖೆಗಳ ಸಿಬ್ಬಂದಿಯವರು ವಕೀಲರು ಹಾಜರಿದ್ದರು