ಕಲಬುರಗಿ : ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಇಂದು ಗುರುಮಠಕಲ್ ವ್ಯಾಪ್ತಿಯ ಕೊಂಕಲ್ ನಲ್ಲಿ ಮಾತನಾಡಿತ್ತಾ, ಕೆಲವರು ನನ್ನನ್ನು ಇಂದ್ರ, ಚಂದ್ರ, 2ನೇ ಅಂಬೇಡ್ಕರ್ ಎನ್ನುತ್ತಿದ್ದರು. ಆದರೆ, ಇಂದು ಅವರೇ ದಿಲ್ಲಿಯಿಂದ ಗಲ್ಲಿವರೆಗೆ ನನ್ನನ್ನು ಸೋಲಿಸಲು ತಂತ್ರ ಹೆಣೆದಿದ್ದಾರೆ ಎಂದರು.

ಅವರೇ ಗೆದ್ದಿಲ್ಲ ಎಂದರೆ ನನ್ನನ್ನು ಹೇಗೆ ಸೋಲಿಸುತ್ತಾರೆ ಎನ್ನುವ ಮೂಲಕ ಮಾಜಿ ಶಾಸಕರಾದ ಎ.ಬಿ.ಮಾಲಕರೆಡ್ಡಿ, ಬಾಬೂರಾವ್ ಚಿಂಚನಸೂರ್ ಮತ್ತು ಮಾಲೀಕಯ್ಯ ಗುತ್ತೇದಾರ್ ಬಗ್ಗೆ ಹೇಳಿದರು.