ಬೆಂಗಳೂರು: ಬಿಜೆಪಿಯ ಅನೇಕರು ಕಪ್ಪುಹಣ ಹೊಂದಿದ್ದರೂ  ದಾಳಿ ಏಕೆ ನಡೆಯುತ್ತಿಲ್ಲ ಎಂದು ಸಿದ್ದರಾಮಯ್ಯರ ಪ್ರಶ್ನೆಮಾಡಿದರು.

ನಮ್ಮ ಬಳಿಯೂ ಎಸಿಬಿ ಇದ್ದು, ಬಿಜೆಪಿ ನಾಯಕರ ಮೇಲೆ ದಾಳಿ ಮಾಡಬಹುದು. ಆದರೆ, ನಾವು ಅಧಿಕಾರ ದುರುಪಯೋಗ ಮಾಡಿಕೊಳ್ಳುವುದಿಲ್ಲ. ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದರೂ ವಿಪಕ್ಷದವರನ್ನು ಗೌರವದಿಂದ ಕಾಣಬೇಕು.

ಪ್ರಧಾನಿ ಮೋದಿಗೆ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಸಂಯುಕ್ತ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಬಿಜೆಪಿಯ ಅನೇಕರು ಕಪ್ಪುಹಣ ಹೊಂದಿದ್ದರೂ ದಾಳಿ ನಡೆಯುತ್ತಿಲ್ಲ. ಕಾಂಗ್ರೆಸ್ ಅಧಿಕಾರ ನಡೆಸಿದ್ದಾಗ ಚುನಾವಣಾ ಸಂದರ್ಭಗಳಲ್ಲಿ ಬಿಜೆಪಿ ನಾಯಕರ ಮೇಲೆ ದಾಳಿ ನಡೆದ ನಿದರ್ಶನ ಇಲ್ಲ ಎಂದರು.