ಬೆಂಗಳೂರು:ಮದುವೆ ಆದವರಿಗೆ ತಾಳಿ- ಕಾಲುಂಗರವೇ ಸೌಭಾಗ್ಯ ಅಂತ ಹಿರಿಯರು ಹೇಳುತ್ತಾರೆ. ಆದ್ರೆ ಇಂದು ನಡೆದ  ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆ(ಎನ್‍ಇಟಿ)ಯನ್ನು ತೆಗೆದುಕೊಂಡ ಮಹಿಳಾ ಅಭ್ಯರ್ಥಿಗಳಿಗೆ ಪರಿವೀಕ್ಷಕರು ತಾಳಿ ಮತ್ತು ಕಾಲುಂಗುರ ತೆಗೆಸಿ ಪರೀಕ್ಷೆ ಬರೆಸಿ ಕಿರಿಕಿರಿ ಮಾಡಿರುವ ಘಟನೆ ಬೆಂಗಳೂರಿನ ಜೆಪಿನಗರದ ಬ್ರಿಗೇಡ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

ಇಂದು ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆ(ಎನ್‍ಇಟಿ)ಯನ್ನು ಬರೆಯುವ ಸಲುವಾಗಿ ಬೆಂಗಳೂರಿನ ಜೆಪಿನಗರದ ಬ್ರಿಗೇಡ್ ಸ್ಕೂಲ್ ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಆಗಮಿಸಿದ್ದರು ಇದೇ ವೇಳೆ ಮಹಿಳಾ ಅಭ್ಯರ್ಥಿಗಳಿಗೆ ತಾಳಿ ಮತ್ತು ಕಾಲುಂಗುರ ತೆಗೆದು ಕೊಠಡಿಯೊಳಗೆ ಬರಬೇಕು ಎಂದು ಪರೀಕ್ಷಾ ಪರಿವೀಕ್ಷಕರು ಕಿರಿಕಿರಿ ಉಂಟು ಮಾಡಿದ್ದಾರೆ ಎಂಬುದು ಸುದ್ದಿ.