ಬೆಂಗಳೂರು: ನಿರ್ಮಾಣ ಹಂತದ ಮನೆಗಳಿಗೆ ನಟಿಮಣಿಯರ ಹಾಟ್ಫೋಟೋ ಬಳಕೆ ಆಂಧ್ರ ಪ್ರದೇಶದಲ್ಲಿ ಜಾಸ್ತಿ ಆಗಿದೆ ಏಕೆ ಅಂದ್ರೆ .?
ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಜನರು ನಿರ್ಮಾಣ ಹಂತದ ಮನೆಗಳಿಗೆ ದೃಷ್ಟಿ ತಗುಲದಂತೆ ಸಿನಿಮಾ ನಟಿಯರ ಫೋಟೋಗಳನ್ನು ನೇತು ಹಾಕುವ ಮೂಲಕ ಹೊಸ ಟ್ರೆಂಡ್ಹುಟ್ಟುಹಾಕಿದ್ದಾರೆ.

ಅನುಷ್ಕಾ ಶೆಟ್ಟಿ, ಹೆಬಾ ಪಟೇಲ್ಅವರ ಹಾಟ್ಹಾಗೂ ಬೋಲ್ಡ್ಚಿತ್ರಗಳನ್ನು ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ನೇತು ಹಾಕಲಾಗುತ್ತಿದೆ. ಹಿಂದೆ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಚಿತ್ರಗಳನ್ನು ನೆಲ್ಲೂರಿನಲ್ಲಿ ಕೆಲ ರೈತರು ತಮ್ಮ ಹೊಲಗಳಲ್ಲಿ ಬಳಸಿದ್ದು ಸುದ್ದಿಯಾಗಿತ್ತು. ಹಾಗಾಗಿ ನಿರ್ಮಾಣ ಹಂತದಲ್ಲಿರುವ ಮನೆಗೆ ದೃಷ್ಠಿ ತಗುಲಬಾರದಂತೆ ಇಂತಹ ಫೋಟೋಗಳುನ್ನು ನೇತುಹಾಕಲಾಗುತ್ತದೆ.!